ಚಿತ್ರದುರ್ಗದಲ್ಲಿ ಇಂದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಮಂದಳತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಬಂದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಹೆಮ್ಮೆಟ್ಟಿಸಲು ಮುತ್ತಿಗೆಗೆ ಯತ್ನ ವಿಫಲಗೊಳಿಸಿದ ಪೊಲೀಸರು ಕೆಲವರನ್ನು ಬಂಧಿಸಿ ಬಸ್ಸಿನಲ್ಲಿ ಕರೆದೊಯ್ದರು.
ಪ್ರತಿಭಟನೆಯು ಬೆಳಗೆ ಇಂದಲೇ ಒನಕೆ ಓಬವ್ವ ವೃತ್ತದ ಸುತ್ತಲೂ ಬ್ಯಾಡ್ಕೆಟ್ ಗಳನ್ನು ಇಟ್ಟು ಪೋಲೀಸರು ಸರ್ಪಗಾವಲಿನಾಗಿ ನಿಂತಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವವರನ್ನು ತಡೆದು ಪ್ರಶ್ನಿಸಿ ಹಿಂದೆ ಕಳಿಸಿದರು ಟೌನ್ ಕೋ ಆಪರೇಟಿಂಗ್ ಸೊಸೈಟಿ ಮುಂಭಾಗ ವಾಸವಿ ಸರ್ಕಲ್ ಡಿಸಿಸಿ ಬ್ಯಾಂಕ್ ಎದುರು ಜಿಲ್ಲಾಧಿಕಾರಿಗಳ ಬಂಗಲೇ ಮುಂಭಾಗ ಡಿಸಿ ಕಚೇರಿ ಎದಿರು ಬ್ಯಾರಿಕೆಟ್ ಗಳನ್ನು ಇಟ್ಟು ಪೊಲೀಸರು ಕಾವಲು ಕಾಯುತ್ತಿದ್ದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಧಿಕಾರಗಳನ್ನು ಕೂಗಿ ಮದಕರಿ ನಾಯಕ ಪ್ರತಿಮೆ ಮುಂಭಾಗದಿಂದ ಮಧ್ಯಾಹ್ನ 1:00 ಸುಮಾರಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಡಾಬಸಿದ ಬಿಜೆಪಿ ಮುಖಂಡರನ್ನು ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ 20 ನಿಮಿಷಕ್ಕೂ ಹೆಚ್ಚು ಕಾಲ ನೂಕಾಟ ತಳ್ಳಾಟವಾಯಿತು ತೋಳ್ಬಲದ ಶಕ್ತಿಯನ್ನೆಲ್ಲ ಬಳಸಿ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು ಬಿಜೆಪಿಯವರಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಆಸ್ಪಂದನೆ ಕೊಡಲಿಲ್ಲ.
ಈ ಪ್ರತಿಭಟನೆಯಲ್ಲಿ ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಹಾಗೂ ಹನುಮಂತೇಗೌಡ ಇವರುಗಳು ಬೆರಿಕೆಗಳನ್ನು ಏರಿ ಡಿಸಿ ಕಚೇರಿಗೆ ನುಗ್ಗಲು ಸಾಕಷ್ಟು ಕಸರತ್ತು ನಡೆಸಿದರು ಪೊಲೀಸರು ಅವಕಾಶ ಕೊಡಲಿಲ್ಲ ಪ್ರತಿಭಟನೆಕಾರರು ಶಿಳ್ಳೆ ಕೇಕೆ ಮುಗಿಲು ಮುಟ್ಟುವಂತೆ ಮಾಡಿತು. ನಾಲ್ಕು ಕೆಎಸ್ಆರ್ಟಿಸಿ ಬಸ್ಸು ಐದಕ್ಕೂ ಹೆಚ್ಚು ಪೊಲೀಸ್ ಮ್ಯಾನ್ ಅಗ್ನಿಶಾಮಕ ವಾಹನ ಆಂಬುಲೆನ್ಸ್ ಎಷ್ಟೆಲ್ಲಾ ವಾಹನಗಳು ಒನಕೆ ಓಬವ್ವ ಸುತ್ತ ನಿಂತಿದ್ದವು.