Breaking
Mon. Dec 23rd, 2024

ಭಾರೀ ಮಳೆಗೆ ದೆಹಲಿ  ಇಂದಿರಾಗಾಂಧಿ ವಿಮಾನ ನಿಲ್ದಾಣ  ಮೇಲ್ಛಾವಣಿ ಕುಸಿದು ಕ್ಯಾಬ್ ಡ್ರೈವರ್‌ ಓರ್ವ ಮೃತ….!

ನವದೆಹಲಿ: ಭಾರೀ ಮಳೆಗೆ ದೆಹಲಿ  ಇಂದಿರಾಗಾಂಧಿ ವಿಮಾನ ನಿಲ್ದಾಣ  ಮೇಲ್ಛಾವಣಿ ಕುಸಿದು ಕ್ಯಾಬ್ ಡ್ರೈವರ್‌ ಓರ್ವ ಮೃತಪಟ್ಟಿದ್ದು, 7 ಜನರಿಗೆ ಗಾಯಗಳಾಗಿವೆ. ಈ ಘಟನೆ ಸಂಬಂಧ ಬಿಜೆಪಿ ಕಾಂಗ್ರೆಸ್‌  ಮಧ್ಯೆ ಕೆಸರೆರಚಾಟ ಆರಂಭವಾದ ಬೆನ್ನಲ್ಲೇ ಮೂಲಸೌಕರ್ಯ ಕಂಪನಿ ಎಲ್‌ ಆಂಡ್‌ ಟಿ  ಸ್ಪಷ್ಟನೆ ನೀಡಿದೆ.

ಕುಸಿದ ರಚನೆಯನ್ನು L&T ನಿರ್ಮಿಸಿಲ್ಲ ಅಥವಾ ಅದರ ನಿರ್ವಹಣೆಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ. ಕುಸಿದು ಬಿದ್ದ ಭಾಗವನ್ನು ಮತ್ತೊಂದು ಕಂಪನಿಯು 2009 ರಲ್ಲಿ ನಿರ್ಮಿಸಿದೆ.

ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ  ಕೋರಿಕೆಯ ಮೇರೆಗೆ, L&T 2019 ರಲ್ಲಿ ಟರ್ಮಿನಲ್‌ 1ರ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿತು. ಟರ್ಮಿನಲ್‌ ವಿಸ್ತೃತ ಭಾಗದಿಂದ ಸರಿಸುಮಾರು 110 ಮೀಟರ್‌ ದೂರದಲ್ಲಿ ಕುಸಿತವು ಸಂಭವಿಸಿದೆ. ಹೊಸದಾಗಿ ನಿರ್ಮಾಣದ ವಿಸ್ತೃತ ಭಾಗದ ಮೇಲೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದೆ.

ಘಟನಾ ಸ್ಥಳಕ್ಕೆ ನಾಗರಿಕ ವಿಮಾನ ಸಚಿವ ರಾಮ್‌ಮೋಹನ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈಜ್ಞಾನಿಕ ಕಾರಣ ಹುಡುಕಲು ಸೂಚಿಸಿದ್ದೇನೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗೆ ನಿರ್ದೇಶಿಸಿದ್ದೇನೆ. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು. 

Related Post

Leave a Reply

Your email address will not be published. Required fields are marked *