ಚಿತ್ರದುರ್ಗ : ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಂದ ಚಿತ್ರದುರ್ಗದಲ್ಲಿ ಇಂದು ಉಗ್ರ ಹೋರಾಟ ನಡೆಸಿದರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು ಹಾಗೂ ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಇವರು ಹೆಚ್ಚು ಭ್ರಷ್ಟಾಚಾರ ತೊಡಗಿ ರಾಜ್ಯದ ಬಖಸವನ್ನು ಖಾಲಿ ಮಾಡುತ್ತಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಸಿಕೊಂಡು ಬೇನಾಮಿ ಖಾತೆ ತೆರೆದು 187 ಕೋಟಿ ರೂಪಾಯಿ ಹಣವನ್ನು ಬೇರೆ ರಾಜ್ಯಕ್ಕೆ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ ಅದು ನೆರ ರಾಜ್ಯವಾದ ಆಂಧ್ರಪ್ರದೇಶಕ್ಕೆ ಈ ಹಣ ರವಾನೆಯಾಗಿದೆ ಎಂದು ಆಪಾದನೆ ಮಾಡಿದರು. ಈ ಹಣವನ್ನು ಬಾರಲ್ಲಿ ಕುಳಿತು ಕುಡಿಯುವವರಿಗೆ ಹಣ ತಲುಪಿದೆ ಇಂತಹ ಕುಡುಕ ಭ್ರಷ್ಟ ಸರ್ಕಾರಕ್ಕೆ ಕಿವಿ ಇಡಬೇಕಾಗಿದೆ ಎಂದು ವಿಜಯೇಂದ್ರ ಅವರು ಎಚ್ಚರಿಕೆ ನೀಡಿದರು.
ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೂರಾರು ಕೋಟಿಗಳನ್ನು ನೀಡಿದರು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಸ್ಐಟಿ ತನಿಕೆ ನಡೆಸುವುದಾಗಿಯೇ ವಿನಹ ಸಚಿವ ನಾಗೇಂದ್ರ ಅವರಿಗೆ ಯಾವುದೇ ತರಹದ ನೋಟಿಸ್ ಕೊಟ್ಟಿಲ್ಲ ಬೇರೆ ಬೇರೆ ರಾಜ್ಯಗಳಿಗೆ ರಾಹುಲ್ ಗಾಂಧಿಗೆ ಹಣ ಹೋಗಿದೆ.
ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಎಟಿಎಂ ಮಷೀನ್ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು ಉಚಿತ ಗ್ಯಾರಂಟಿ ಯೋಜನೆ ಗಳಿಗೆ ಹಣ ಒದಗಿಸಲು ಹೆಣಗಾಡುತ್ತಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಕೂಡ ಈ ಹಗರಣದಲ್ಲೇ ಕೇಳುತ್ತಿದೆ ರಾಜ್ಯದಲ್ಲಿ ಬರಗಾಲವಿದ್ದರೂ ರೈತರು ಕಷ್ಟ ನೋವುಗಳನ್ನು ಅನುಭವಿಸುತ್ತಿದ್ದಾರೆ ಅಂತಹ ರೈತರಿಗೆ ಸಹಾಯ ಮಾಡದೆ ಇವರ ಮೋಜು ಮಸ್ತಿಗೆ ಹಣ ರವಾನೆ ಆಗಿರುವುದು ಏಕೆ ಎಂದು ಪ್ರಶ್ನೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ನೆರಳಗುಂಟೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಾಲ್ಮೀಕಿ ಜನಾಂಗದ ಹಣವೇ ಬೇಕಿತ್ತಾ 187 ಕೋಟಿ ರೂಪಾಯಿ ಗಳನ್ನು ಬೇರೆಬೇರೆ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಈ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಇಲ್ಲದಿದ್ದರೆ ಈ ಹೋರಾಟವನ್ನು ಉಗ್ರವಾಗಿ ಕೈಗೊಳ್ಳುತ್ತೇವೆಂದು ತಿಳಿಸಿದರು.
ಬಿಜೆಪಿಯ ಪ್ರತಿಭಟನೆಯಲ್ಲಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್, ಮಾಜಿ ಶಾಸಕರಾದ ಜಿಎಚ್ ತಿಪ್ಪಾರೆಡ್ಡಿ, ಎಸ್ ವಿ ರಾಮಚಂದ್ರಪ್ಪ, ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರಪ್ಪ ಹನುಮಂತಪ್ಪ, ರಾಜ್ಯ ಕಾರ್ಯದರ್ಶಿ ಶರಣ್ ತಾಳಿಕೆರೆ, ಎಸ್ ಲಿಂಗಮೂರ್ತಿ, ಉಮೇಶ್ ಕಾರಜೋಳ್, ಬಿಜೆಪಿ ಜಿಲ್ಲಾಧ್ಯಕ್ಷ ಏ ಮುರಳಿ, ಹನುಮಂತೇಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಯುವ ಮುಖಂಡರಾದ ಎಂಸಿ ರಘು ಚಂದನ್, ಕುಮಾರಸ್ವಾಮಿ, ಜಿಎಸ್ ಅನಿತಾ ಕುಮಾರ್ ಇನ್ನು ಹಲವಾರು ಜನರು ಮತ್ತು ಮುಖಂಡರು ಭಾಗವಹಿಸಿದ್ದರು.