ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಗೊಂಡೆನಹಳ್ಳಿ ಕ್ರಾಸ್ ಬಳಿ ಬೇಕರ ಅಪಘಾತ ಸಂಭವಿಸಿದೆ ಈ ಅಪಘಾತದಲ್ಲಿ ಭದ್ರಾವತಿಯ 13 ಮಂದಿ ಮೃತಪಟ್ಟಿದ್ದಾರೆ. ಟಿಟಿಯು ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದರು ಟಿಟಿಯಲ್ಲಿ ಇದ್ದ 13 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯ ಜನರು ಅಂಬುಲೆನ್ಸ್ ಗೆ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ತಿಳಿಸಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸಕ್ಕೆ ಮುಂದಾಗಿದ್ದರು. ಈ ಅಪಘಾತವು ನೋಡಲು ಭಯಂಕರವಾಗಿತ್ತು ಸಿಲುಕಿಕೊಂಡವರು ನರಳಾಡುತ್ತಿದ್ದರು. ಈ ಕೂಡಲೇ ಎರಡು ಆಂಬುಲೆನ್ಸ್ ಸಿಬ್ಬಂದಿ ಬಂದಿದ್ದವು.
ಇಂದಿನಿಂದ ಬಂದು ನೋಡಿದಾಗ ಏನು ಮಾಡಬೇಕೆಂದು ಗೊತ್ತಾಗುತ್ತಿರಲಿಲ್ಲ ಕೊನೆಗೆ ಹಿಂಬದಿಯ ಸೀಟನ್ನು ಮುರಿದು ರಕ್ಷಣೆಗೆ ಮುಂದಾದರು ಒಳಗಡೆ ಒಂದು ಪಾಪು ಇನ್ನಿಬ್ಬರು ಸಿಕ್ಕಿ ಹಾಕಿಕೊಂಡಿದ್ದರು.
ಅವರು ಅಮ್ಮ ಅಮ್ಮ ಎಂದು ನರಳಾಡುತ್ತಿದ್ದರು ಹೊರಗಡೆ ತೆಗೆದು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಮಗುವನ್ನು ಅಡ್ಮಿಟ್ ಮಾಡಿ ವಾಪಸ್ ಆದರೂ ಮತ್ತೆ ಮಕ್ಕಳು ಪುರುಷರು ಗಾಡಿಯಲ್ಲಿ ಸೀಟ್ ಗಳಿಗೆ ಸಿಕ್ಕ ಹಾಕಿಕೊಂಡು ಒದ್ದಾಡುತ್ತಿದ್ದರು ಈ ರೀತಿಯಾದ ಅಪಘಾತಗಳನ್ನು ನೋಡಿದಾಗ ಭಯಂಕರ ಅನಿಸಿತು ಎಂದು ಸ್ಥಳೀಯರು ವರದಿಯಲ್ಲಿ ತಿಳಿಸಿದರು. ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಸುಮಾರಿಗೆ ಅಪಘಾತ ನಡೆದಿದೆ. ಈ ಘಟನೆಯು ಚಾಲಕನ ಅಜಾಗುರುಕತೆ ಕಾರಣ ಎಂದು ತಿಳಿದುಬಂದಿದೆ ಮತ್ತು ಆತ ನಿದ್ರಾಮಂಪರಿನಲ್ಲಿ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಮೃತರನ್ನು ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಮ್ಮ (40), ಅರ್ಪಿತ (18), ಸುಭದ್ರ ಬಾಯಿ (65), ಪುಣ್ಯ (50), ಮಂಜುಳಾ ಬಾಯಿ, ಚಾಲಕ ಆದರ್ಶ್ (23), ಮಾನಸ (24), ರೂಪ (40), ಮಂಜುಳಾ (50), ಎಂದು ಗುರುತಿಸಲಾಗಿದೆ. ಇವರೆಲ್ಲಾ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಂಎ ಹಟ್ಟಿ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಇವರು ಟಿಟಿ ವಾಹನದಲ್ಲಿ 15 ಮಂದಿ ಸೌದತ್ತಿ ರೇಣುಕಾ ಎಲ್ಲಮ್ಮ ದೇವರ ದರ್ಶನ ಪಡೆದು ಮರಳಿ ವಾಪಸ್ ಆಗುವ ವೇಳೆ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಒಂಬತ್ತು ಮಹಿಳೆಯರು ಎರಡು ಪುಟ್ಟ ಮಕ್ಕಳು ಇಬ್ಬರು ಗಂಡು ಮಕ್ಕಳು ಮೃತ ದುರ್ದೈವಿಗಳು. ಇವರ ಮೃತ ದೇಹವನ್ನು ಹಾವೇರಿ ಜಿಲ್ಲೆಯ ಜಿಲ್ಲಾಸ್ಪತ್ರೆ ಸಾವಕಾರಕ್ಕೆ ಸಾಗಿಸಲಾಗಿದೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶಿಕುಮಾರ್ ತಿಳಿಸಿದರು.