ಸಿರುಗುಪ್ಪ : ನಗರದ ಪೊಲೀಸ್ ಠಾಣೆಯಿಂದ ಅಕ್ರಮವಾಗಿ ಸಾಗಾಟ ನಡೆಸುತ್ತಿರುವ ಆಹಾರ ಇಲಾಖೆಯ ನಿರೀಕ್ಷಕರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 45 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಸೀಮಾಂಧ್ರ ಪ್ರದೇಶದ ಹೊಳಗುಂದಿ ಗ್ರಾಮದ ಕಡೆಯಿಂದ ಸಿರುಗುಪ್ಪ ಪಟ್ಟಣದ ಕಡೆಗೆ ಟಾಟಾ ಕಂಪನಿಯ ಗೂಡ್ಸ್ ವಾಹನದಲ್ಲಿ 13 ಕ್ವಿಂಟಲ್ 50 ಕೆ.ಜಿ.ಯ ರೂ.39150/-ಮೌಲ್ಯದ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾರೆ
ಆಹಾರ ಇಲಾಖೆ ಅಧಿಕಾರಿಗಳು ನೀಡಿದ ಖಚಿತ ಮಾಹಿತಿಯು ನಗರದ ಆದೋನಿ ರಸ್ತೆಯಲ್ಲಿ ಪೊಲೀಸರು ದಾಳಿ ಮಾಡಿ ಅಕ್ಕಿ ಮತ್ತು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನು ಬಂಧಿಸಲಾಗಿದೆ.