ಬೆಂಗಳೂರು : ಪಿಎಸ್ಐ ಸಬ್ ಇನ್ಸ್ಪೆಕ್ಟರ್ ತಮ್ಮ ಇಲಾಖೆಯ ಕೆಳಹಂತದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಕೇಸು ಬಸವೇಶ್ವರನಗರ ಪೋಲಿಸ್ ಠಾಣೆಯಲ್ಲಿ ನಡೆದಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಸಂತ್ರಸ್ತನಿಗೆ ಒಂದು ತಿಂಗಳ ಒಳಗಾಗಿ 2 ಲಕ್ಷ ಪರಿಹಾರ ಕೊಡಬೇಕೆಂದು ರಾಜ್ಯ ಸರ್ಕಾರದ ಒಳ ಆಡಳಿತ ಇಲಾಖೆ ಶಿಫಾರಸ್ಸು ಮಾಡಿದೆ.
ಕೆ ಟಿ ಸತೀಶ್ ಆರೋಪಿತ ಹಾಗೂ ಪಿ ಎಸ್ ಐ ಜೋಲಿ ಮೊಹಲ್ಲಾದ ನಿವಾಸಿ ಸುನಿಲ್ ಕುಮಾರ್ ಇವರು ಕಚೇರಿಗೆ ನುಗ್ಗಿ ಪರ್ಸನಲ್ ಸರ್ವಿಸ್ ಬಗ್ಗೆ ವಿಚಾರಣೆ ನಡೆಸಿ ಆತನ ಮೇಲೆ ತಮ್ಮ ಸಿಬ್ಬಂದಿ ಸೇರಿದಂತೆ ಅಲ್ಲೆ ನಡೆಸಿದರು. ಬಳಿಕ ಗೀತಾ ತಮಗೆ ಬೇಕಾಗಿರುವ ವ್ಯಕ್ತಿಯಲ್ಲ ಎಂದು ತಿಳಿದು ಆತನನ್ನು ಕಳಿಸಿದ್ದರು. ಈ ಸಂಬಂಧ ಸುನಿಲ್ ಕುಮಾರ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು.
ಈ ಕೇಸು ಸುಮಾರು ಎರಡು ವರ್ಷ ಗಳ ಕಾಲ ಸುಧೀರ್ಘ ತಾನಿಖೆ ನಡೆಸಿ ರಾಜ್ಯ ಮಾನವ ಹಕ್ಕುಗಳ ಆಯೋಗ ಇದೀಗ ಪಿಎಸ್ಐ ಅಧಿಕಾರ ದುರ್ಬಳಕೆ ಹಾಗೂ ಅಮಾಯಕ ವ್ಯಕ್ತಿಯ ಮೇಲೆ ಹಲ್ಲೇ ನಡೆಸಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಿಎಸ್ಐ ವಿರುದ್ಧ ಇಲಾಖೆ ತನಿಖೆ ನಡೆಸಿ ಬಳಿಕ ಪರಿಹಾರ ರೂಪದಲ್ಲಿ ನೀಡುವ ಎರಡು ಲಕ್ಷನ್ನು ಪಿಎಸ್ಐ ವೇತನದಿಂದ ಹೊಸಳ್ಳಿ ಮಾಡಬೇಕೆಂದು ಶಿಫಾರಸ್ಸು ಪತ್ರದಲ್ಲಿ ತಿಳಿಸಲಾಗಿದೆ ಜೊತೆಗೆ ಇಲಾಖೆ ವಿಚಾರಣೆ ನಡೆಸಿದ ಬಳಿಕ ಅನುಪಮ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆಯೋಗವು ನಿರ್ದೇಶಿಸಿದೆ.
ಈ ಘಟನೆಯು 2021 ರಲ್ಲಿ ಬಸವೇಶ್ವರನಗರ ಪೊಲೀಸ್ ಠಾಣಾ ಕಾರ್ಯಾ ವ್ಯಾಪ್ತಿಯಲ್ಲಿದ್ದ ಪಿಎಸ್ಐ ಕೆಟಿ ಸತೀಶ್ ಮತ್ತು ತಂಡ ಪ್ರಕರಣ ಒಂದರಲ್ಲಿ ಸುನಿಲ್ ಎಂಬಾತ ನನ್ನು ಶೋಧನೆ ನಡೆಸುವುದಾಗಿ ಅವರನ್ನು ಜೋಲಿ ಮೊಹಲ್ಲಾ ನಿವಾಸದಿಂದ ತಾವು ಹುಡುಕುವ ವ್ಯಕ್ತಿ ಇವನೆಂದು ತಪ್ಪಾಗಿ ಭಾವಿಸಿ, ಪಿಎಸ್ಐ ಹಾಗೂ ಈ ಠಾಣೆಯ ಸಿಬ್ಬಂದಿ ಕರೆದುಕೊಂಡು ಬಂದರು. ಆತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿ ನಂತರ ತಾವು ಹುಡುಕುವ ವ್ಯಕ್ತಿ ಇವನಲ್ಲ ಎಂದು ಗೊತ್ತಾದ ಮೇಲೆ ಆತನನ್ನು ಮನೆಗೆ ಕಳಿಸಿದರು ಸುನಿಲ್ ಕುಮಾರ್ ಎಂಬ ವ್ಯಕ್ತಿ ನನ್ನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.