ಚಿಕ್ಕೋಡಿ : ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಪ್ರಕಾಶ ಕೆಂಗಾರೆ ಎಂಬ ನಕಲಿ ವೈದ್ಯ ನಡೆಸುತ್ತಿದ್ದ ಆಸ್ಪತ್ರೆಯ ಮೇಲೆ ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ, ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಗಡದ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಭಾಗ್ಯ ಅವರು ಗುರುವಾರ ತಡರಾತ್ರಿ ದಾಳಿ ನಡೆಸಿ, ಪರಿಶೀಲಿಸಿದರು.
ಪ್ರಕಾಶ ಕೆಂಗಾರೆ ಕುರಿತು ಜನಸ್ಪಂದನ ಸಭೆಯಲ್ಲಿ ದೂರು ಬಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಸೂಚನೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ದೂರು ಹಿನ್ನೆಲೆಯಲ್ಲಿ ಆರೋಪಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ, ಅದಕ್ಕೆ ಉತ್ತರಿಸದೇ ಮೂರು ದಿನಗಳಿಂದ ನಾಪತ್ತೆಯಾದ ಕಾರಣ ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ’ ಎಂದು ಡಾ.ಎಸ್.ಎಸ್.ಗಡದ ವರದಿ ಮಾಡಿದೆ.