Breaking
Mon. Dec 23rd, 2024

ನಿರ್ಮಲಾ ಸೀತಾರಾಮನ್ ಅವರು ಚಿತ್ರದುರ್ಗ ನಗರಕ್ಕೆ ಅತಿ ಶೀಘ್ರವಾಗಿ 5300 ಕೋಟಿ ಬಿಡುಗಡೆ ಮಾಡಲಿದ್ದಾರೆ ಎಂದು ಗೋವಿಂದ ಕಾರಜೋಳ್….!

ಚಿತ್ರದುರ್ಗ : ಬಿಜೆಪಿ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಕಾಮಗಾರಿ ಮುಂದುವರಿಸಲು ಕಳೆದ ಬಜೆಟಿನಲ್ಲಿ 5300 ಕೋಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ನಿರ್ಮಲ ಸೀತಾರಾಮನ್ ಅವರು ಭರವಸೆ ನೀಡಿದ್ದರು.

ಇದರ ವಿಚಾರವಾಗಿ ಗೋವಿಂದ ಕಾರಜೋಳ್ ಅವರು ಮಾತನಾಡಿ ನಮ್ಮ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಹಣದ ಕೊರತೆಯಿಂದ ಸ್ಥಗಿತಗೊಂಡಿದೆ ಅದನ್ನು ಮುಂದುವರಿಸಲು ನಿರ್ಮಲ ಸೀತಾರಾಮ್ ಜೊತೆ ಮಾತನಾಡಿದ್ದೇವೆ ಎಂದು ಗೋವಿಂದ ಕಾರಜೋಳ್ ಅವರು ತಿಳಿಸಿದರು. ಇಂದು ನಗರದ ಪತ್ರಿಕ ಭವನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚಿತ್ರದುರ್ಗ ಭಾಗಕ್ಕೆ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಅತಿ ಅವಶ್ಯಕವಾಗಿದೆ.

ಈ ಯೋಜನೆಯ ಜಾರಿಯಾಗಿರುವುದರಿಂದ ಲಕ್ಷಾಂತರ ಭೂಮಿ ನೀರಾವರಿಯಾಗಲಿದೆ ಇದುವರೆಗೆ ರಾಜ್ಯ ಸರ್ಕಾರ ಈ ಯೋಜನೆಗೆ ಖರ್ಚು ಮಾಡಿರುವ ಬಗ್ಗೆ ಕೇಂದ್ರದ ಜಲಮಂಡಳಿ ಕೇಂದ್ರಕ್ಕೆ ರಾಜ್ಯ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸಂಪೂರ್ಣ ವರದಿ ಮಾಹಿತಿಯನ್ನು ಕೊಟ್ಟರೆ ಕೇಂದ್ರದಿಂದ ಹಣ ಬಿಡುಗಡೆಯಾಗಲಿದೆ ಎಂದು ದೆಹಲಿಯ ಸಂಸದರು ಸಭೆಯಲ್ಲಿ ಕೇಂದ್ರಾ ಹಣಕಾಸು ಸಚಿವೆಗೆ ಮಾಹಿತಿ ನೀಡಿದರು ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸುವಂತೆ ಸಿಎಂ ಸಿದ್ದರಾಮಯ್ಯನವರು ಮನವಿ ಮಾಡಿದ್ದಾರೆ ಎಂದರು. 

ರಾಜ್ಯದ ಹಲವಡೆ ಕೇಂದ್ರ ಸರ್ಕಾರ ವಿದ್ಯಾಲಯಗಳನ್ನು ತೆರೆದಿದೆ ಆದರೆ ಚಿತ್ರದುರ್ಗದಲ್ಲಿ ಇದುವರೆಗೂ ಸಹ ಕೇಂದ್ರೀಯ ವಿದ್ಯಾಲಯ ತೆರೆಯುವಂತೆ ಕೇಂದ್ರ ಸಚಿವ ಧರ್ಮೇಂದ್ರ ಕುಮಾರ್ ಮನವಿ ಮಾಡಲಾಗಿದೆ ಈ ಕೇಂದ್ರ ಪ್ರಾರಂಭವಾಗಿರುವುದರಿಂದ ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯ ಸಿಗಲಿದೆ ಚಿತ್ರದುರ್ಗದಲ್ಲಿ ವಿದ್ಯಾಲಯ ಸ್ಥಾಪನೆ ಬಗ್ಗೆ ಸಚಿವರು ನಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.

ಚಿತ್ರದುರ್ಗ ರೈಲ್ವೆ ನಿಲ್ದಾಣದಲ್ಲಿ ಹಲವು ರೈಲುಗಳು ಸಂಚರಿಸುತ್ತಿದ್ದು ಮತ್ತಷ್ಟು ರೈಲುಗಳ ನಿಲ್ದಾಣ ಆಗಬೇಕೆಂದು ಪ್ರಯಾಣಿಕರು ಬಯಸುತ್ತಿದ್ದಾರೆ ಈ ಹಿನ್ನಲೆಯಲ್ಲಿ ವಾಸ್ಕೋಡಿಗಾಮ ಯಶವಂತಪುರ ಬೆಳಗಾವಿ ವಾಸ್ಕೋಡಿಗಾಮ ವಿಶ್ವಮಾನವ ಚಾಲುಕ್ಯ ಗೋಲ್ ಗುಮ್ಮಟ ಸೇರಿದಂತೆ ಇತರೆಗಳನ್ನು ನಿಲ್ಲಿಸುವಂತೆ ರೈಲ್ವೆ ಸಚಿವ ಅಶ್ವಿನ್ ಹಾಗೂ ಸೋಮಣ್ಣ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಸಂಸದರು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ.

ಕೇಂದ್ರದ ಹಲವು ಯೋಜನೆಗಳು ನೇರವಾಗಿ ಬರುತ್ತವೆ ಮತ್ತೆ ಕೆಲವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬರುತ್ತವೆ ರೈಲ್ವೆ ಯೋಜನೆಗೆ ಸಂಬಂಧಿಸಿ ದಂತೆ ರಾಜ್ಯದ ಸರ್ಕಾರ ಶೇಕಡ 80ರಷ್ಟು ಭೂಮಿಯನ್ನು ವಶಪಡಿಸಿಕೊಳ್ಳಬೇಕು ಹಾಗೂ ಯೋಜನೆಯ ಶೇಕಡ 50ರಷ್ಟು ಹಣವನ್ನು ನೀಡಿದರೆ ಭೂ ಯೋಜನೆಗೆ ಕಾರ್ಯಗತಗೊಳಿಸಲು ಸಾಧ್ಯ ಎಂದರು. ದಾವಣಗೆರೆ ಮತ್ತು ತುಮಕೂರು ನೇರ ರೈಲ್ವೆ ಯೋಜನೆಗೆ ಸಂಬಂಧಿಸಿ ದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಯೋಜನೆ ಯಾವ ಸ್ಥಿತಿಯಲ್ಲಿದೆ ಎಂದು ಮಾಹಿತಿ ಪಡೆದು ಖುದ್ದಾಗಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ ಮುರಳಿ, ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಪತ್ತು, ಮಧುಗಿರಿ ಗಿರೀಶ್, ಸುರೇಶ್ ಸಿದ್ದಾಪುರ, ಅಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗೇಂದ್ರ ಬೇಂದ್ರೆ, ದಗ್ಗೆ ಶಿವಪ್ರಕಾಶ್, ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಸೇರಿದಂತೆ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *