ಚಿತ್ರದುರ್ಗ : ನಗರದ ಜನಪ್ರಿಯ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಅವರ ಐವತ್ತನೇ ಹುಟ್ಟು ಹಬ್ಬ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಎಸ್ ಮಂಜುನಾಥ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಇದೇ ಭಾನುವಾರ ಮಧ್ಯಾನ 12 ಕ್ಕೆ ನಗರದ ಮೆಜೆಸ್ಟಿಕ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ ಹಾಗೂ ಈ ಕಟ್ಟಡ ಶ್ರಮಜೀವಿ ಕಟ್ಟಡ ಮತ್ತು ಕೊಲಿ ಕಾರ್ಮಿಕರ ಸೇವೆ ಪಡೆಯ ರಾಜ್ಯ ಸಮಿತಿಯ ಸಂಘದ ನೂತನ ಕಚೇರಿಯ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಹಿಂದಿನ ದಿನಮಾನಗಳಲ್ಲಿ ಕೂಲಿ ಕೆಲಸ ಮಾಡುವವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ ಸರ್ಕಾರವು ಸಹ ಅವರ ಪರವಾಗಿ ಇಲ್ಲವಾಗಿದೆ ಈ ಹಿನ್ನಲೆಯಲ್ಲಿ ನೂತನ ಸೇವಾ ಪಡೆಯುವ ಉದ್ದೇಶದಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಟ್ಟಡ ಹಾಗೂ ಕೊಲಿ ಕಾರ್ಮಿಕರಿಗೆ ನ್ಯಾಯವನ್ನು ಕೊಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಸಮಾರಂಭದ ಸಾನಿಧ್ಯವನ್ನು ಮುರುಗಮಠದ ಬಸವ ಪ್ರಭು ಶ್ರೀಗಳು, ಮಾದರ ಚೆನ್ನಯ್ಯ ಶ್ರೀಗಳು, ಕೃಷ್ಣಾನಂದ ಶ್ರೀಗಳು, ಮಡಿವಾಳ ಮಾಚಿದೇವ ಶ್ರೀಗಳು, ಬಸವನಗತಿ ದೇವ ಶ್ರೀಗಳು, ಇಮ್ಮಡಿ ಮೇದಾರ ಕೇತೇಶ್ವರ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಸುಗಮಾನಂದ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ನೆರವೇರಿಸಲಿದ್ದಾರೆ ಶಾಸಕರಾದ ಗೋವಿಂದಪ್ಪ, ಟಿ ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿಟಿ ಶ್ರೀನಿವಾಸ್, ಮಾಜಿ ಸಂಸದ ಚಂದ್ರಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಲಿತ ಕೃಷ್ಣಮೂರ್ತಿ, ಶ್ರೀಮತಿ ಸವಿತಾ ರಘು, ತಾಜ್ಪೀರ್, ಶಿವು ಯಾದವ್ ಸೇರಿದಂತೆ ಇನ್ನು ಮುಂತಾದವರು ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.