ಬೆಂಗಳೂರು : ಖಾಸಗಿ ನರ್ಸಿಂಗ್ ಕಾಲೇಜುನಲ್ಲಿ ನಿಲ್ಲಿಸಿರುವ ಬಸ್ಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಐದು ಬಸ್ಸುಗಳು ಸಂಪೂರ್ಣವಾಗಿ ಆಹುತಿಯಾಗಿರುವ ಘಟನೆ ಬೆಂಗಳೂರಿನ ಹೆಗ್ಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಈ ಘಟನೆಯಲ್ಲಿ ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿದೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಇನ್ನು ಹಳೆ ಬಸ್ಸುಗಳು ಅಗ್ನಿಶಾಮಕ ಕಟ್ಟಡದ ಕಾಲೇಜ್ ನಲ್ಲಿ ನಿಲ್ಲಿಸಲಾಗಿದೆ ಎಂದು ಮಧ್ಯಾಹ್ನ ಎರಡು ಮೂವತ್ತರ ಸುಮಾರಿಗೆ ಆಕಸ್ಮಿಕವಾಗಿ ಒತ್ತಿದರೆ ಈ ಘಟನೆ ಸಂಭವಿಸಿದೆ.
ಬೆಂಕಿ ಒತ್ತಿಕೊಂಡಾಗ ಸ್ಥಳೀಯ ಜನರು ನಗರದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡರು ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ರಾಜಗೋಪಾಲ ಪೊಲೀಸ್ ಠಾಣೆಗೆ ಆಡಳಿತ ಮಂಡಳಿ ಕರೆ ಮಾಡಿ ಈ ಕುರಿತು ಪೊಲೀಸ್ ತನಿಖೆ ಆರಂಭಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.