ಬೆಂಗಳೂರು : ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕರಣ ನ್ಯಾಯಾಲಯದಲ್ಲಿದ್ದು, ಇದರ ಬಗ್ಗೆ ಏನು ಮಾತಾನಾಡುವುದಿಲ್ಲ. ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿಸಿಗಲಿ ಎಂದು ಹೇಳಿದರು.
ದರ್ಶನ್ ಆರಾಮಾಗಿದ್ದಾರಾ ಎಂಬ ಪ್ರಶ್ನೆಗೆ ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಆರಾಮಾಗಿ ಇರುತ್ತಾರಾ ಎಂದು ಭಾವುಕರಾಗಿ ಪ್ರಶ್ನಿಸಿದರು. ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿ, ನ್ಯಾಯಾಲಯದಲ್ಲಿರುವ ಕಾರಣ ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿ ತೆರಳಿದರು.
ಪರಪ್ಪನ ಅಗ್ರಹಾರಕ್ಕೆ ಕಾರಿನಲ್ಲಿ ರಕ್ಷಿತಾ, ಪ್ರೇಮ್ ದಂಪತಿ ಆಗಮಿಸಿ ಭೇಟಿ ಮಾಡಿದರು. ಜೈಲು ನಿಯಮಗಳ ಪ್ರಕಾರ ಒಂದು ವಾರದಲ್ಲಿ ಮೂವರಿಗೆ ಮಾತ್ರ ಬೇಟಿ ಮಾಡಲು ಅವಕಾಶ ಇರುತ್ತದೆ. ಈ ಮೊದಲು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ದರು. ನಂತರ ನಟ ವಿನೋದ್ ಪ್ರಭಾಕರ್ ಭೇಟಿ ಮಾಡಿ ಮಾತನಾಡಿದ್ದರು.