ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಇಬ್ಬರು ಆಟೋ ಚಾಲಕರು ವಿದ್ಯುತ್ ಸ್ಪರ್ಷದಿಂದ ಸಾವನಪ್ಪಿದ ಘಟನೆ ಪಾಂಡೇಶ್ವರ ನಗರದ ರೊಸಾರಿಯೋ ಶಾಲೆಯ ಬಳಿ ನಡೆದಿದೆ. ಅತಿ ಹೆಚ್ಚು ಮಳೆ ಬಂದಿರುವ ಕಾರಣದಿಂದ ಈ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಮಂಗಳೂರಿನ ರೊಸಾರಿಯೋ ಶಾಲೆಯ ಬಳಿ ಬುಧವಾರ ರಾತ್ರಿ ವಿದ್ಯುತ್ ಸ್ಪರ್ಶಿ ಇಬ್ಬರು ಆಟ ಚಾಲಕರು ಮೃತಪಟ್ಟಿದ್ದಾರೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಬಾಜೆ ಗ್ರಾಮದಲ್ಲಿ ಸಂಜೆ ಮಹಿಳೆಯೊಬ್ಬರು ಅದೇ ಪಾಡು ಅನುಭವಿಸಿ ಮೊನ್ನೆ ಬುಧವಾರ ಬೆಳಗ್ಗೆ ಮಂಗಳೂರು ಹೊರಬಲೆಯಿಂದ ಗೋಡೆ ಕುಸಿದು ಬಿದ್ದು ನಾಲ್ವರು ಮೃತಪಟ್ಟಿದ್ದಾರೆ.
ಮೃತ ಆಟ ಚಾಲಕರ ಹೆಸರನ್ನು ಹಾಸನ ಜಿಲ್ಲೆಯ ಆಲೂರಿನ ಪಾಳ್ಯ ಹೋಬಳಿಯ ಅಣ್ಣೇಗೌಡರ ಪುತ್ರ ರಾಜು ಐವತ್ತು ಹಾಗೂ ದಕ್ಷಿಣ ಕನ್ನಡ ಪುತ್ತೂರು ತಾಲೂಕಿನ ರಾಮು ಕೊಂಚ ಗ್ರಾಮದ ವೀರಪ್ಪಗೌಡ ಅವರ ಪುತ್ರ ದೇವರಾಜ್ 46 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕರು ಜೆರೊಸ್ ಚರ್ಚ್ ಬಳಿ ಬಾಡಿಗೆಗೆ ಕೊಠಡಿಯಲ್ಲಿ ವಾಸವಾಗಿದ್ದರು ಬುಧವಾರ ರಾತ್ರಿ 9:00ಗೆ ಸುಮಾರಿಗೆ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸಂಪರ್ಕ ಬಂದಿದ್ದು ಬಾರಿ ಮಳೆಯಾಗಿದ್ದೆಂದ ಲೈನ್ ಕುಸಿದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಅನುಪಮ್ ಅಗರವಾಲ್ ತಿಳಿಸಿದರು.
ರಾಜು ತನ್ನ ಕೋಣೆಯಿಂದ ಹೊರ ಬಂದಾಗ ಮೊದಲು ಆನ್ಲೈನ್ ಸಂಪರ್ಕ ಬಂದನು ರಾಜುವಿನ ಕಿರುಚಾಟ ಕೇಳಿ ಹೊರ ಬಂದ ದೇವರಾಜ್ ಗೋಣಿಚೀಲ ಬಳಸಿ ರಕ್ಷಿಸಲು ಮುಂದಾಗಿದ್ದಾರೆ ಆದರೆ ಪ್ರಯೋಜನಕಾರಿಯಾಗದೆ ಅವರು ಸಹ ಸ್ಥಳದಲ್ಲಿ ಸಾವನ್ನಪ್ಪಿದ್ದರು.
ಈ ಘಟನೆ ಗುರುವಾರ ಮುಂಜಾನೆ ನಡೆದಿದ್ದು ಎಂದು ಪೊಲೀಸರು ಮೊದಲು ಭಾವಿಸಿದ್ದರು. ಆದರೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ಬುದುವಾರ ರಾತ್ರಿ ನಡೆದಿದೆ ಎಂದು ತಿಳಿದುಬಂದಿದೆ ಬುಧವಾರ ರಾತ್ರಿ ಸುುರಿದ ಭಾರಿ ಮಳೆಯಿಂದ ನೆರೆೆಹೊರೆಯವರು ಯಾರು ಈ ಘಟನೆಯನ್ನು ಗಮನಿಸಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ ಪದ್ಮಾವತಿ ಮಾತನಾಡಿ ಮರದ ಕೊಂಬೆ ಬಿದ್ದು ಬಿದ್ದುತ್ತಂತೆ ತುಂಡಾಗಿ ಕಂಪನಿಯು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು ಈ ಘಟನೆ ನಡೆದಿದೆ ಎಂದು ಹೇಳಿದರು. ಅಪಾಯವನ್ನುಂಟು ಮಾಡುವ ವಿದ್ಯುತ್ ಸರಬರಾಜು ಮಾರ್ಗಗಳನ್ನು ಪರಿಶೀಲಿಸುವಂತೆ ನಗರ ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಇಂತಹ ಯಾವುದೇ ಕೇಬಲ್ಗಳು ಕಂಡು ಬಂದಲ್ಲಿ ಜನರು ಕಂಪನಿಯ ಸಹಾಯವಾಣಿ 1912 ಗೆ ಕರೆ ಮಾಡಬಹುದೆಂದು ಶ್ರೀಮತಿ ಪದ್ಮಾವತಿ ತಿಳಿಸಿದರು.