Breaking
Mon. Dec 23rd, 2024

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೋಹಿನಿ ಅವರ ಅಕಾಲಿಕ ಮರಣ ಯಡಿಯೂರಪ್ಪ ಸಂತಾಪ….!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇವರ ಪುತ್ರಿ ಹಂಸ (46) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಂದಾಗ ಹಂಸ ಮೈಲಿ ಅವರು ಭರತನಾಟ್ಯ ನೃತ್ಯಗಾರ್ತಿ ಹಾಗೂ ಪ್ರಾಯೋಗಿಕ ನೃತ್ಯ ಸಂಯೋಜಕವಾಗಿ ಖ್ಯಾತಿಯನ್ನು ಪಡೆದಿದ್ದರು. ಇದಲ್ಲದೆ ದೇವದಾಸಿಯರ ಜೀವನವನ್ನು ಆಧರಿಸಿದಂತೆ ತಮಿಳುನಾ ಖ್ಯಾತ ಚಲನಚಿತ್ರ ಶೃಂಗಾರಂನಲ್ಲಿ ಕೂಡ ಅಭಿನಯಿಸಿ ನಟಿ ಅಂತಲೂ ಕರೆಸಿಕೊಂಡಿದ್ದರು ಇಂತಹ ಅವರು ಇಂದು ನಿಧನ ಹೊಂದಿದ್ದಾರೆ.

ಪುತ್ರಿಯ ನಿಧಾನದ ಸುದ್ದಿ ತಿಳಿದಂತೆ ಮಾಜಿ ಸಿಎಂ ವಿರಪ್ಪ ಮೋಹಿನಿ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬುದಾಗಿ ತಿಳಿಸಿದರು. ನಾಳೆ ಬೆಳಗ್ಗೆ ಪುತ್ರಿಯ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.

ಹಂಸ ಮೋಯ್ಲಿ ಅವರು ಅನಾರೋಗ್ಯ ಹಿನ್ನೆಲೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಆದರೆ ಅವಮಾನದಿಂದ ಏಕಾಏಕಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರದೆ ಎನ್ನಲಾಗಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿಸಿದರು.

ವೀರಪ್ಪ ಮೊಯ್ಲಿ ಪುತ್ರಿ ನಿಧಾನಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಹಿರಿಯ ರಾಜಕೀಯ ದೊರಿಣ, ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೋಹಿನಿ ಅವರ ಅಕಾಲಿಕವಾಗಿ ವಿಧಿವಶರಾದ ಸುದ್ದಿ ಅತೀವ ದುಃಖ ಉಂಟು ಮಾಡಿದೆ.

ಸಮಾಜ ಸೇವಕಿ ಭರತನಾಟ್ಯ ಕಲಾವಿದೆಯಾಗಿದ್ದ ಆಕೆಯ ಅಗಲಿಕೆ ಹೆತ್ತವರಿಗೆ ಕುಟುಂಬದ ಸದಸ್ಯರಿಗೆ ಆದಷ್ಟು ನೋವು ತಂದಿದೆ ಎನ್ನುವದನ್ನು ಊಹಿಸಲು ಸಾಧ್ಯವಿಲ್ಲ. ದೇವರು ಅವರ ಅಗಲಿಕೆಗೆ ಚೇತನಕ್ಕೆ ಸಾಧ್ಯತೆ ನೀಡಲಿ ಕುಟುಂಬಸ್ಥರು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

Related Post

Leave a Reply

Your email address will not be published. Required fields are marked *