ಚಿತ್ರದುರ್ಗ : ತ.ರಾ.ಸು. ರಂಗಮಂದಿರದಲ್ಲಿ ನಾಯಕ ಸಮಾಜದಿಂದ ನಡೆದ ರಾಜಾ ವೀರ ಮದಕರಿ ನಾಯಕನ 270ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕ ಡಾಕ್ಟರ್ ಎನ್ ಎಸ್ ಮಹಾಂತೇಶ್ ಅವರು ಚಿತ್ರದುರ್ಗಕ್ಕೆ ತನ್ನದೇ ಆದ ಇತಿಹಾಸ ಸಾಂಸ್ಕೃತಿಕ ಪರಂಪರೆ ಇದೆ ಎಂದರು.
ಕದಂಬರು ಶಾತವಾನರು ಚಾಲುಕ್ಯರು ವೈಶಾಳರು ಹೊಯ್ಸಳರು ರಾಷ್ಟ್ರಕೂಟರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ ಎನ್ನುವುದಕ್ಕೆ ಶಾಸನಗಳು ಸಾಕ್ಷಿ ಇವೆ. 20ನೇ ಶತಮಾನದ ಇಲ್ಲಿ ಉತ್ತರಾರ್ಧ ಭಾಗದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ ಪ್ರಜಾಪ್ರಭುತ್ವ ಕಲ್ಯಾಣ ಬಂದಿದ್ದು ಪಾಳೇಗಾರರ ಮನೆತನದಿಂದ ವಿಜಯನಗರದ ಸಾಮ್ರಾಜ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದರು ಪಾಳೆಗಾರರು ಎನ್ನುವುದನ್ನು ಮರೆಯುವಂತಿಲ್ಲ ಎಂದು ನೆನಪಿಸಿಕೊಂಡರು.
ಪಾಳೆಗಾರರನ್ನು ನಿರ್ಲಕ್ಷಿಸಿದ್ದಕ್ಕೆ ವಿಜಯನಗರ ಸಾಮ್ರಾಜ್ಯ ಪತನವಾಯಿತು 211 ವರ್ಷಗಳ ಕಾಲ 11 ಅರಸರು ಚಿತ್ರದುರ್ಗದ ಕೋಟೆಯನ್ನು ಆಳ್ವಿಕೆ ಮಾಡಿದ್ದಾರೆ ಉಲ್ಲೂರು ಶ್ರೀನಿವಾಸ ಜೋಹೇಶ್ವರ ಲಕ್ಷ್ಮಣ್ ತಲವಾದಿ ಸಾಹಿತಿ ಬಿ ಎಲ್ ವೇಣು ಇವರು ಚಿತ್ರದುರ್ಗದ ಇತಿಹಾಸವನ್ನು ಸರಣಿಯಾಗಿ ಬರೆದಿದ್ದಾರೆ. ತಾರಾಸು ಅವರ ದುರ್ಗಾಸ್ತಮಾನ ಕಾದಂಬರಿ ಬರೆದೆ ಹೋಗಿದ್ದರೆ ಇತಿಹಾಸ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.
ಚಿತ್ರದುರ್ಗವನ್ನು ವೀರಮದಕರಿ ನಾಯಕ, ಮತ್ತಿ ತಿಮ್ಮಣ್ಣ ನಾಯಕ, ಭರಮಣ್ಣ ನಾಯಕ, ಹಿರೇ ಮದಕರಿ ನಾಯಕ, ಇವರುಗಳು ಪರಾಕ್ರಮಿಗಳಾಗಿದ್ದರು. 12ನೇ ವರ್ಷಕ್ಕೆ ಪಟ್ಟಾಕೇರಿದ ರಾಜವೀರ ಮದಕರಿ ನಾಯಕನಲ್ಲಿ ಶೌರ್ಯ ಪರಾಕ್ರಮವನ್ನು ಬೆಳೆಸುವಲ್ಲಿ ಗಂಡುಹೋಬ್ಬವ್ವ ನಾಗತಿ ಪಾತ್ರವೂ ಅಡಗಿದೆ ಎನ್ನುವುದು ಬಹಳಷ್ಟು ಜನರ ಗೊತ್ತಿಲ್ಲ. ಹೈದರಾಲಿಗೆ ರಾಜಾ ತತ್ವದ ಪರಿಪಾಲನೆ ಅಧಿಕಾರ ತೋರಿಸಿಕೊಟ್ಟಿದ್ದು ರಾಜ ವೀರ ಮದಕರಿ ನಾಯಕ.
ಚಿತ್ರದುರ್ಗದ ಚರಿತ್ರೆಯಲ್ಲಿ ಧೀಮಂತ ರೋಚಕವಾಗಿ ಆಳ್ವಿಕೆ ನಡೆಸಿದ ರಾಜ ವೀರ ಮದಕರಿ ನಾಯಕನ ಅಂತ್ಯ ಅತ್ಯಂತ ಭೀಕರವಾಗಿತ್ತು. ಏಷ್ಯಾ ಖಂಡದಲ್ಲಿಯೇ ಇಂತಹ ಭದ್ರವಾದ ಏಳು ಸುತ್ತಿನ ಕೋಟೆ ಎಲ್ಲಿಯೂ ಇಲ್ಲ, ಎಂದು ಫ್ರೆಂಚ್ ಅಧಿಕಾರಿ ಹೇಳಿದ್ದಾರೆ. ಚಿತ್ರದುರ್ಗದ ಬಗ್ಗೆ ಎಲ್ಲರೂ ಅಭಿಮಾನ ಮೂಡಿಸಿಕೊಂಡು ಇತಿಹಾಸವನ್ನು ರಕ್ಷಿಸಬೇಕಿದೆ ಎಂದರು.