ಬೆಂಗಳೂರಿನ ಪುಲಿಕೇಶಿನಗರದ ಅಪ್ಪು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಬಂಧನವಾಗಿದೆ. ರೌಡಿಯಾಗಬೇಕೆಂದು ಹೊರಟಿದ್ದ ಅಪ್ಪು ಎಂಬಾತನನ್ನು ಅದೇ ಏರಿಯಾದ ಹುಡುಗರ ಗ್ಯಾಂಗ್ ಕೊಂದು ಹಾಕಿತ್ತು.
ಮಹಾಲಕ್ಷ್ಮಿಲೇಔಟ್ ನಿವಾಸಿಯಾಗಿರುವ ಅಪ್ಪು ಹುಡುಗರ ಮೇಲೆ ದರ್ಪ ಮೆರೆದು ಹಲ್ಲೆ ನಡೆಸಿ ಕೊಲೆಗೆ ಸ್ಕೆಚ್ ಹಾಕಿದ್ದ. ಏರಿಯಾದಲ್ಲಿ ಹವಾ ತೋರಿಸಲು ಸಿಕ್ಕ ಸಿಕ್ಕವರಿಗೆ ಹೊಡಿತ್ತಿದ್ದ. ಅಪ್ಪುವಿನ ವರ್ತನೆಗೆ ಬೇಸತ್ತಿದ್ದ ಏರಿತರಾ ಹುಡುಗರು, ಮಾತನಾಡುವ ನೆಪದಲ್ಲಿ ಕರೆಸಿಕೊಂಡಿದ್ದರು.
ಜೀವನಹಳ್ಳಿ ರೈಲ್ವೆ ಟ್ರಾಕ್ ಬಳಿ ಬಂದಿದ್ದ ಅಪ್ಪು ಮೇಲೆ ಏಕಾಏಕಿ ನಾಲೈದು ಮಂದಿ ದಾಳಿ ಮಾಡಿದ್ದರು. ಇವರಿಂದ ತಪ್ಪಿಸಿಕೊಳ್ಳಲು ಹೋದಾಗ ಅಪ್ಪುನನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಬಳಿಕ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಂದು ಹಾಕಿದ್ದರು.
ಈ ಕೃತ್ಯದ ಬಳಿಕ ಕೊಲೆಗಾರರು ತಲೆಮರೆಸಿಕೊಂಡಿದ್ದರು. ಇದೀಗ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಅರುಣ್ ಕುಮಾರ್, ಜಾನ್ ಜಾಕೋಬ್, ಆಯಂಡೀಸ್, ಪ್ರಶಾಂತ್ ಹಾಗು ಸಂಜೀವ್ ಎಂಬ ಆರೋಪಿಗಳನ್ನು ಬಂಧಿಸಿರುವ ಪುಲಿಕೇಶಿನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.