ಮುಂಬೈ : ಪ್ರವಾಸಿ ತಾಣಗಳಿಗೆ ಹೆಚ್ಚು ಜನರು ನೋಡುವುದಕ್ಕೆ ಅಲ್ಲಿನ ಸೌಂದರ್ಯವನ್ನು ಸವಿಯೋದಕ್ಕೆ ಹೋಗುತ್ತಾರೆ ಹಾಗೆ ನೋಡುವುದಕ್ಕೆ ಹೋಗಿದ್ದ ಕುಟುಂಬ ಒಂದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ಐದು ಜನರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಕೋಣೆಯಲ್ಲಿ ಇಂದು ನಡೆದಿದೆ. ಈ ಕುಟುಂಬವು ಖುಷಿಯಿಂದ ಸಮೀಪದಲ್ಲಿರುವ ಭುಷಿ ಅಣೆಕಟ್ಟನ್ನು ನೋಡಲು ಲೋನೊವಾಲದಲ್ಲಿನ ಜಲಪಾತದಲ್ಲಿ ಎದೆ ನಡುಗಿಸುವ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಮಹಿಳೆಯರು ಸೇರಿದಂತೆ ನೀರಿನಲ್ಲಿ ಕಚ್ಚೆ ಹೋದ ಎಲ್ಲರೂ ಐವರು ಮೃತಪಟ್ಟಿರುವ ಸಂಖ್ಯೆ ಉಂಟಾಗಿದೆ. ಹದಾಪ್ಸರ್ ನ ಸೈಯದ್ ನಗರದ ನಿವಾಸಿಗಳಾದ ಎರಡು ಕುಟುಂಬಗಳ ಪಾಲಿಗೆ ಮುಂಗಾರು ಪ್ರವಾಸದ ಮೋಜು ಈಗ ಶಾಪವಾಗಿ ಪರಿಣಮಿಸಿದೆ.
36 ವರ್ಷದ ಮಹಿಳೆ ಹಾಗೂ 13 ವರ್ಷ ಮತ್ತು 8 ವರ್ಷ ದ ಇಬ್ಬರು ಹೆಣ್ಣುಮಕ್ಕಳು ಮುಳುಗಿ ಪ್ರಾಣ ಕಳೆದುಕೊಂಡಿದ್ದು ಅವರ ಮೃತ ದೇಹಗಳು ಪತ್ತೆಯಾಗಿವೆ ಆದರೆ 4 ವರ್ಷದ ಬಾಲಕ ಮತ್ತು 9 ವರ್ಷದ ಬಾಲಕಿಯ ಶವಗಳು ಇನ್ನು ಪತ್ತೆಯಾಗಿಲ್ಲ.
ಭುಷಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಜಲಪಾತದತ್ತಾ ಅಧಿಕ ಪ್ರಮಾಣದ ನೀರು ನುಗ್ಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಜಲಪಾತದಲ್ಲಿ ನೀರುಪಾಲಾದವರನ್ನು ಶಹಿಸ್ತಾ ಲಿಯಾಕತ್ ಅನ್ಸಾರಿ (36) ಅಮೀಮಾ ಆದಿಲ್ ಅನ್ಸಾರಿ (13) ಮತ್ತು ಉಮೆರಾ ಆದಿಲ್ ಅನ್ಸಾರಿ (8) ಎಂದು ಗುರುತಿಸಲಾಗಿದೆ. ಅದ್ನಾನ್ ಸುಭಾಹತ್ ಅನ್ಸಾರಿ(4) ಮತ್ತು ಮರಿಯಾ ಅಖಿಲ್ ಅನ್ಸಾರಿ (9) ದೇಹಗಳಿಗೆ ಹುಡುಕಾಟ ನಡೆಸಲಾಗಿದೆ.
ಅಣೆಕಟ್ಟೆ ಸಮೀಪದ ಬೆಟ್ಟದ ಪ್ರದೇಶದ ಸುಮಾರು ಎರಡು ಕಿಲೋಮೀಟರ್ ಎತ್ತರದ ಪ್ರದೇಶವನ್ನು 15 ಜನರ ತಂಡ ಹತ್ತಿತ್ತು ಜಲಪಾತದ ನೀರಿನ ಅರಿವು ಕಡಿಮೆ ಇದ್ದರಿಂದ ಮಧ್ಯಭಾಗದಲ್ಲಿ ನಿಂತು ಮಕ್ಕಳು ಆಟವಾಡುತ್ತಿದ್ದರು ಆದರೆ ನೀರಿನ ಪ್ರಮಾಣದಲ್ಲಿ ದಿಡೀರ್ ಏರಿಕೆಯಾಗಿದೆ ಆಗ ನೀರಿನ ನಡುವೆ ಇದ್ದ ಕನಿಷ್ಠ 10 ಮಂದಿ ಒಬ್ಬರಿಗೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದರು. ಆದರೆ ನೀರಿನ ರಭಸ ಹೆಚ್ಚಾದ್ದರಿಂದ ಎಲ್ಲರೂ ನೀರಿಗೆ ಬಿದ್ದರು ಸ್ಥಳೀಯರು ಮತ್ತು ಇತರೆ ಪ್ರವಾಸಿಗರು ಅರಸಹಸ ಪಟ್ಟು ಐವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ರಕ್ಷಿಸಲಾದ ಇಬ್ಬರು ವ್ಯಕ್ತಿಗಳಿಗೆ ಗಾಯವಾಗಿದೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೋಣೆ ಗ್ರಾಮೀಣ ವಲಯದ ಎಸ್ ಪಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ಶಿವದುರ್ಗ ಮಿತ್ರ ಲೋನೊ ವಾಲ್ ಹಾಗೂ ಮಾವಲ್ ನ ವನ್ಯಜೀವಿ ರಕ್ಷಣಾ ವಿಭಾಗದ ರಕ್ಷಣಾ ತಂಡಗಳು ನಾಪತ್ತೆಯಾದ ಮಕ್ಕಳಿಗಾಗಿ ಭಾನುವಾರ ಸಂಜೆವರೆಗೂ ತೀವ್ರ ಶೋಧ ಕಾರ್ಯ ನಡೆಸಿವೆ ಕತ್ತಲಾದ ಕಾರಣ ನಾವು ಶೋಧ ಕಾರ್ಯಾಚರಣೆ ನಿಲ್ಲಿಸ ಬೇಕಾಗಿತ್ತು ಸೋಮವಾರ ಬೆಳಗ್ಗೆ ಹುಡುಕಾಟ ಮುಂದುವರೆಸಲಾಗುವುದು ಎಂದು ವನ್ಯಜೀವಿ ರಕ್ಷಕ್ ತಂಡ ನಿಲೇಶ್ ಗರಾಡೆ ಹೇಳಿದ್ದಾರೆ.
ಭುಷಿ ಅಣೆಕಟ್ಟೆಯ ನೀರಿಗೆ ಪ್ರವೇಶಿಸದಂತೆ ಜಲಪಾತದ ಸುತ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ ಮಳೆಗಾಲದಲ್ಲಿ ಈ ಭಾಗ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ. ಈ ಅವಧಿಯಲ್ಲಿ ನೂರಾರು ಮಂದಿ ಚರಣ ನಡೆಸುತ್ತಾರೆ ಭುಷಿ ಅಣೆಕಟ್ಟೆಯಿಂದ ಇಲ್ಲಿ ಹಲವಾರು ಜಲಪಾತಗಳು ಸೃಷ್ಟಿಯಾಗಿದ್ದು ಹಲವಾರು ಅಪಘಾತಗಳು ಸಂಭವಿಸಿದರೂ ಅಧಿಕಾರಿಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಪ್ರವಾಸಿಗರು ನೀರಿಗೆ ಇಳಿಯುವ ದುಸ್ಸಾಹಸ ಮಾಡುತ್ತಿದ್ದಾರೆ.
ಹದಾಪ್ಸರ್ ನಿಂದ ಬಂದಿದ್ದ 15 ಜನರ ಎರಡು ಕುಟುಂಬಗಳು ಸಹ ಇಂತಹ ಎಚ್ಚರಿಕೆಗಳಿಗೆ ಕಿವಿ ಕೊಟ್ಟಿರಲಿಲ್ಲ ಮಿನಿ ಬಸ್ಸಿನಲ್ಲಿ ಬಂದಿದ್ದ ಈ ಗುಂಪು ಬೆಟ್ಟದ ತುದಿಗೆ ಹೋಗಬಾರದಿತ್ತು ಮತ್ತು ಖುಷಿ ಅಣೆಕಟ್ಟೆಯ ನೀರಿನ ಜಾಗವನ್ನು ಪ್ರವೇಶಿಸಬಾರದು ಎಂಬ ಸಲಹೆಗಳನ್ನು ನಿರ್ಲಕ್ಷಿಸಿತು ಪ್ರವೇಶ ನಿರ್ಬಂಧಿಸಲಾಗಿರುವ ಜಾಗಕ್ಕೆ ಈ ಗುಂಪು ತೆರಳಿತು ಅಲ್ಲಿ ಎಚ್ಚರಿಕೆ ಫಲಕಗಳಿದ್ದರೂ ಅವರು ಕಡೆಗಣಿಸಿದರು ಎಂದು ಲೋನಾವಾಲಾ ವಿಭಾಗದ ಡಿ ಎಸ್ ಪಿ ಸತ್ಯಸಾಯಿ ಕಾರ್ತಿಕ್ ತಿಳಿಸಿದ್ದಾರೆ.
ಮಾವಲ್ ತಾಲೂಕಿನಲ್ಲಿ ಉತ್ತಮವಾದ ಮಳೆಯಾಗಿದ್ದರಿಂದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು ಬೆಟ್ಟ ಭಾಗದಲ್ಲಿಯೂ ಬಾರಿ ಮಳೆ ಸುರಿದಿತ್ತು ದಿಡೀರ್ ಪ್ರವಾಹ ದಂತಹ ಸನ್ನಿವೇಶ ಉಂಟಾಗಿತ್ತು ಇಂತಹ ಸಂದರ್ಭದಲ್ಲಿ ಈ ಕುಟುಂಬವು ಮನರಂಜನೆಗಾಗಿ ಹೆಚ್ಚು ಆಸಕ್ತಿ ತೋರಿಸಿ ಎಂತಹ ದುಸ್ಸಾಹಸಕ್ಕೆ ಕೈ ಹಾಕಿದೆ ಆದರೆ ಮಹಿಳೆ ಹಾಗೂ 13 ವರ್ಷದ ಬಾಲಕಿಯ ಶವಗಳು ಮಧ್ಯಾಹ್ನ ದೊರೆತಿದೆ. 8 ವರ್ಷದ ಬಾಲಕಿಯ ಮೃತ ದೇಹ ಸಂಜೆ ಪತ್ತೆಯಾಗಿತ್ತು.