ಹೊಳಲ್ಕೆರೆ : ಜನರು ವೈದ್ಯರನ್ನು ದೇವರೆಂದು ಭಾವಿಸಿದ್ದಾರೆ ಅವರು ಆಸ್ಪತ್ರೆಗೆ ಬರುವ ರೋಗಿಗಳ ಪ್ರಾಣವನ್ನು ಉಳಿಸುವ ಪವಿತ್ರ ಕರ್ತವ್ಯ ಇವರಿಗೆ ನೀಡಿದ್ದಾರೆ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಡಾಕ್ಟರ್ ಬಿಂಧನ್ ಚಂದ್ರ ರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವೈದ್ಯರನ್ನು ಜನರು ದೇವರಂತೆ ಕಾಣುತ್ತಾರೆ. ಪರಮ ಪವಿತ್ರವಾದ ವೃತ್ತಿ ಈ ವೈದ್ಯ ವೃತ್ತಿ ಇಲ್ಲಿ ಸೇವೆ ಮಾಡುವ ಅವಕಾಶ ಯಾರಿಗೂ ಸಿಗುವುದಿಲ್ಲ ವೈದ್ಯರಾದ ನಿಮ್ಮ ಕೈಯಲ್ಲಿ ಜನರ ಪ್ರಾಣ ಉಳಿಸಬಹುದು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಎಂದು ತಿಳಿಸಿದರು.
ಕೆಲವೊಮ್ಮೆ ವೈದ್ಯರಿಗೆ ಒತ್ತಡ ಸಮಸ್ಯೆ ಪರಿಸ್ಥಿತಿ ಘನ ಗುಣವಾಗಿ ಪ್ರತಿಯೊಬ್ಬರಿಗೂ ಕಾಯಿಲೆ ಬರುವುದು ಸಹಜ ಇವುಗಳನ್ನು ಎದುರಿಸುವ ದೈರ್ಯ ರೋಗಿಗಳಿಗೆ ಇರುವುದಿಲ್ಲ ಅವರಿಗೆ ದೈರ್ಯ ತುಂಬಿ ವಿಶ್ವಾಸ ಮೂಡಿಸುವ ಕೆಲಸ ವೈದ್ಯರದ್ದಾಗಿರುತ್ತದೆ ಪ್ರತಿದಿನ ವ್ಯಾಯಾಮ ವಾಯು ವ್ಯವಹಾರ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಸೇವೆಗೆ ಮಹತ್ವ ಕೊಡುವ ದಿನ ಇದಾಗಿರುವುದರಿಂದ ವೈದ್ಯರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.
ಹೊಳಲ್ಕೆರೆಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ವಿನಯ್ ಪಿ ಸಜ್ಜನ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್ ಶಿವಮೂರ್ತಿ, ಗೌರವ ಅಧ್ಯಕ್ಷ ಎಸ್ ಮಾರುತೇಶ್, ಡಾಕ್ಟರ್ ಶಿವಲಿಂಗಪ್ಪ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸುಮಿತ್ರ, ಗಂಗಾಧರಪ್ಪ ಕವಿ ಸಿದ್ದನಹಳ್ಳಿ, ವೀರೇಶ್ ಕುಮಾರ್, ಜೆ ಎ ದೇವೇಂದ್ರಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.