Breaking
Mon. Dec 23rd, 2024

ಜಿಲ್ಲಾ ಆಡಳಿತ ವತಿಯಿಂದ ಚಿತ್ರ ಹಳ್ಳಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಉದ್ಘಾಟನೆ…..!

ಹೊಳಲ್ಕೆರೆ : ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜನರಿಗೆ ಅನುಕೂಲ ಆಗಲೆಂದು ಜನ ಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದರು. ಜಿಲ್ಲಾ ಆಡಳಿತ ವತಿಯಿಂದ ಚಿತ್ರ ಹಳ್ಳಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನಸ್ಪಂದನ ಮೂಲಕ ಚಿತ್ರ ಹಳ್ಳಿ ಭಾಗದ ಜನರ ಸಮಸ್ಯೆ ಕಡೆಗೆ ಸರ್ಕಾರ ಸ್ಪಂದಿಸಲಿದೆ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಹೆಣ್ಣುಮಕ್ಕಳು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇವರ ಬಗ್ಗೆ ಅತಿ ಹೆಚ್ಚು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಹೆಚ್ಚಿನ ಹೊತ್ತು ಕೊಡಲಾಗುತ್ತದೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಜನಸ್ಪಂದನ ಕಾರ್ಯಕ್ರಮವನ್ನು ಕೊಡಲಾಗುವುದು ಅದಕ್ಕಾಗಿ ಅಗತ್ಯ ಕ್ರಮಗಳನ್ನು ರೂಪಿಸುವುದಾಗಿ ಹೇಳಿ ಸಚಿವ ಡಿ ಸುಧಾಕರ್ 5 ಬಾರಿ ಶಾಸಕರಾಗಿರುವ ಡಾಕ್ಟರ್ ಎಂ ಚಂದ್ರಪ್ಪ ಹೊಳಲ್ಕೆರೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆಂದು ಹೇಳಿದರು.

ಹೊಳಲ್ಕೆರೆ ಶಾಸಕ ಡಾಕ್ಟರ್ ಎಂ ಚಂದ್ರಪ್ಪ ಮಾತನಾಡಿ ಕ್ಷೇತ್ರಾದ್ಯಂತ ಯಾವುದೇ ಹಳ್ಳಿಗಳಿಗೆ ಹೋಗಲಿ ಯಾರಿಂದಲೂ ನಾನು ಹೇಳಿಸಿಕೊಳ್ಳದೆ ಎಲ್ಲೆಲ್ಲಿ ಏನೇನು ಸಮಸ್ಯೆ ಆಗದೆ ಎಂಬುದನ್ನು ತಿಳಿದುಕೊಂಡು ಅಭಿವೃದ್ಧಿಪಡಿಸುತ್ತೇನೆ. ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕೆನ್ನುವ ಉದ್ದೇಶವಿಟ್ಟುಕೊಂಡು ಜನ ಸ್ಪಂದನ ಕಾರ್ಯಕ್ರಮಕ್ಕೆ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದೇವೆ.

ಮೊದಲೇ ನಾನು ಈ ಭಾಗದ ಶಾಸಕನಾಗಿಲ್ಲ ಭರಮ್ ಸಾಗರದಲ್ಲಿ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಿದ್ದೆ ಅಲ್ಲಿನ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಗುಣಮಟ್ಟವಾದ ರಸ್ತೆಗಳಲ್ಲಿ ಇರಲಿಲ್ಲ 5 ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಿಗೂ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದೇನೆ ಫಲಕವಾಗಿ ರಸ್ತೆ ರಾಜ ಎಂದು ಬಿರುದು ಕೂಡ ನೀಡಿ ಎರಡನೇ ಬಾರಿಗೂ ಗೆಲ್ಲಿಸಿದ್ದಾರೆಂದು ಸ್ಮರಿಸಿಕೊಳ್ಳುತ್ತೇನೆ. 

ಹೊಳಲ್ಕೆರೆ ತಾಲೂಕಿನಲ್ಲಿರುವಷ್ಟು ವಸತಿ ಹಾಸ್ಟೆಲ್ ಗಳು ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ತೊಂದರೆ ಆಗಬಾರದೆಂದು ಸ್ವಂತ ಖರ್ಚಿನಿಂದ ಬಸ್ ಗಳನ್ನು ಅನುಕೂಲ ಒದಗಿಸಿದ್ದೇನೆ ಡ್ರೈವರ್ ಗಳ ಸಂಬಳ ನೀಡಿ ಡೀಸೆಲ್ ಹಾಕಿ ಕಳಿಸಿದ್ದೇನೆ ಮಕ್ಕಳು ಶಿಕ್ಷಣವಂತರಗಬೇಕೆಂದು‌ ಸರ್ಕಾರ ಉಚಿತ ಪಠ್ಯಪುಸ್ತಕ ಸಮವಸ್ತ್ರ ಮಧ್ಯಾಹ್ನದ ಬಿಸಿಊಟ ಎಲ್ಲವನ್ನು ಕೊಡುತ್ತಿದೆ ಆರ್ಥಿಕವಾಗಿ ಬಲಶಾಲಿಯಾಗಬೇಕೆಂದರೆ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟೇಶ್ ಹೊಳಲ್ಕೆರೆ ತಾಸಿಲ್ದಾರ್ ಬಿಬಿ ಪಾತಿಮ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ಮತ್ತು ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗಿತ್ತು.

Related Post

Leave a Reply

Your email address will not be published. Required fields are marked *