Breaking
Mon. Dec 23rd, 2024

ಹೊಸ ಕ್ರಿಮಿನಲ್ ಕಾನೂನುಗಳು ಸಂತ್ರಸ್ತರ ಪರ ನ್ಯಾಯ ಆಧಾರಿತವಾಗಿರುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ….!

ಹೊಸ ದೆಹಲಿ : ಹೊಸ ಕ್ರಿಮಿನಲ್ ಕಾನೂನುಗಳು ಸಂತ್ರಸ್ತರ ಪರ ನ್ಯಾಯ ಆಧಾರಿತವಾಗಿರುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸೋಮವಾರ ಹೇಳಿದ್ದಾರೆ. ಸಂಸತ್ತಿನ ಗ್ರಂಥಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ದೇಶ ಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರ ಅಪರಾಧ ನ್ಯಾಯ ವ್ಯವಸ್ಥೆಯು ಹೇಗ ಸಂಪೂರ್ಣವಾಗಿ ಸ್ವದೇಶಿ ಆಗಿದ್ದು ಭಾರತೀಯ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ 75 ವರ್ಷಗಳ ನಂತರ ಹೊಸಹತ್ತು ಶಾಹಿ ಕಾನೂನುಗಳನ್ನು ಭಾರತೀಯ ಸಂಪತ್ತು ಜಾರಿಗೆ ತಂದ ಹೊಸ ಕಾನೂನುಗಳನ್ನೊಂದಿಗೆ ಜುಲೈ ಒಂದರಂದು ಸೋಮವಾರದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.

ದಂಡ ಬದಲಿಗೆ ಅದು ಈಗ ನ್ಯಾಯ ಹಾಗಿದೆ ವಿಳಂಬದ ಬದಲಿಗೆ ತ್ವರಿತ ವಿಚಾರಣೆ ಮತ್ತು ತ್ವರಿತ ನ್ಯಾಯಾಲಯ ಇರುತ್ತದೆ ಮೊದಲು ಪೊಲೀಸರು ಹಕ್ಕುಗಳನ್ನು ಮಾತ್ರ ರಕ್ಷಿಸಲಾಗುತ್ತಿದೆ ಆದರೆ ಈಗ ಸಂತ್ರಸ್ತರು ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ ಎಂದು ಅಮಿತ್ ಷಾ ತಿಳಿಸಿದರು. ಹೊಸ ದೃಷ್ಟಿ ಕೋನವನ್ನು ಪ್ರತಿ ಬಿಂಬಿಸುವ ಮೂರು ಹೊಸ ಕಾನೂನುಗಳು ಮಧ್ಯರಾತ್ರಿ ಇಂದ ಜಾರಿಗೆ ಬಂದಿವೆ.

ಈಗ ಭಾರತೀಯ ದಂಡ ಸಂಹಿತೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಇರುತ್ತದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಸಿ ಆರ್ ಪಿ ಸಿ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತ (ಬಿ ಎನ್ ಎಸ್ ಎಸ್ )ಇರುತ್ತದೆ. ಭಾರತೀಯ ಸಾಕ್ಷಾ ಕಾಯಿದೆ ಬದಲಿಗೆ ಭಾರತೀಯ ಸಾಕ್ಷಿ ಅಧಿನಿಯಮ (ಬಿ ಎಸ್ ಎ) ಇರುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ಕುರಿತು ಮಾತನಾಡಿದ ಅಮಿತ್ ಷಾ ಹೊಸ ಕಾನೂನು ಸಂತ್ರಸ್ತರ ಹೇಳಿಕೆಯನ್ನು ಅವರ ಮನೆಯಲ್ಲೇ ದಾಖಲಿಸಲು ಅವಕಾಶ ಒದಗಿಸುತ್ತದೆ ಸಾಮಾಜಿಕ ನಿಂದನೆಯಿಂದ ಅವಳನ್ನು ರಕ್ಷಿಸುವ ಆನ್ಲೈನ್ fir ಸೌಲಭ್ಯದ ಬಗ್ಗೆ ಸಚಿವರು ತಿಳಿಸಿದರು.

ಗುಂಪು ಹತ್ಯೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಅದನ್ನು ಈಗ ವ್ಯಾಖ್ಯಾನಿಸಲಾಗಿದೆ ಇದು ಬಹುಕಾಲದ ಬೇಡಿಕೆಯಾಗಿತ್ತು ಅಲ್ಲದೆ ದೇಶದ್ರೋಹದ ಸೆಕ್ಷನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿ ದೇಶ ವಿರೋಧಿ ಚಟುವಟಿಕೆಗಳಿಗೆ ಹೊಸ ಸೆಕ್ಷನ್ ತಂದಿದೆ.

ಈ ಹಿಂದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಅಪರಾಧ ಈಗ ಭಾರತದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಇರುವ ಪ್ರಯತ್ನಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಇದೆ ಎಂದು ಹೇಳಿದ್ದಾರೆ.

ಅಮಿತ್ ಶಾ ಸುದ್ದಿ ಗೋಷ್ಠಿಯ ಮುಖ್ಯಾಂಶಗಳು : ದಂಡ ಬದಲಿಗೆ ಈಗ ನ್ಯಾಯ ಆಗಿದೆ ವಿಳಂಬದ ಬದಲಿಗೆ ತ್ವರಿತ ವಿಚಾರಣೆ ಮತ್ತು ತ್ವರಿತ ನ್ಯಾಯ ಇರುತ್ತದೆ.

ಮೊದಲು ಪೊಲೀಸರು ಹಕ್ಕುಗಳನ್ನು ಮಾತ್ರ ರಕ್ಷಿಸಲಾಗುತ್ತಿತ್ತು ಆದರೆ ಈಗ ಸಂತ್ರಸ್ತರು ಮತ್ತು ದೂರುದಾರರ ಹಕ್ಕುಗಳನ್ನು ರಕ್ಷಿಸಲಾಗುವುದು .

ಭಾರತೀಯ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ವಿಭಾಗಗಳು ಮತ್ತು ಅಧ್ಯಾಯಗಳಿಗೆ ಆದ್ಯತೆಯ ನೀಡಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಅಧ್ಯಯನಗಳಿಗೆ ಮೊದಲು ಆದ್ಯತೆ ನೀಡಲಾಗುತ್ತದೆ 35 ವಿಭಾಗಗಳು ಮತ್ತು 13 ನಿಬಂಧನೆಗಳೊಂದಿಗೆ ಸಂಪೂರ್ಣ ಅಧ್ಯಾಯನವನ್ನು ಸೇರಿಸಲಾಗುತ್ತದೆ.

ಈಗ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ 20 ವರ್ಷ ಜೈಲು ಶಿಕ್ಷೆ ಅಥವಾ ಜೀವಿತಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಅಪರಾಪ್ತ ವಯಸ್ಕರ ಅತ್ಯಾಚಾರಕ್ಕೆ ಮರಣದಂಡನೆ ಒಬ್ಬರ ಗುರುತನ್ನು ಮರೆಮಾಚುವ ಮೂಲಕ ಅಥವಾ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಲೈಂಗಿಕ ಶೋಷಣೆಗಾಗಿ ಪ್ರತ್ಯೇಕ ಅಪರಾಧಗಳನ್ನು ವ್ಯಾಖ್ಯಾನಿಸಲಾಗುತ್ತದೆ.

ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಮನೆಯಲ್ಲೇ ಮಹಿಳಾ ಅಧಿಕಾರಿಗಳು ಮತ್ತು ಅವರ ಕುಟುಂಬದವರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಆನ್ಲೈನ್ ಎಫ್ ಐ ಆರ್ ನ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ ಈ ಮೂಲಕ ಬಹಳಷ್ಟು ಮಹಿಳೆಯರನ್ನು ಮುಜುಗರದಿಂದ ರಕ್ಷಿಸಬಹುದು ಎಂದು ನಾವು ನಂಬಿದ್ದೇವೆ.

ಮೊಟ್ಟ ಮೊದಲ ಬಾರಿಗೆ ಗುಂಪು ಹತ್ಯೆಯನ್ನು ವ್ಯಾಖ್ಯಾನಿಸಲಾಗಿದ್ದು ಅಪರಾಧಿಗಳಿಗೆ ಏಳು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

ಮುಂದಿನ 50 ವರ್ಷಗಳ ಪರಿಗಣಿಸಿ ಭವಿಷ್ಯದ ತಾಂತ್ರಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾನೂನುಗಳನ್ನು ವಿನ್ಯಾಸಗೊಳಿಸಲಾಗಿದೆ 99.9 ರಷ್ಟು ಪೊಲೀಸ್ ಠಾಣೆಗಳು ಈಗ ಗಣಕೀಕೃತಗೊಂಡಿದೆ.

Related Post

Leave a Reply

Your email address will not be published. Required fields are marked *