ದೇಶಾದ್ಯಂತ ಸುದ್ದಿಯಾಗಿರುವ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ ಅವರ ನ್ಯಾಯಾಂಗ ಬಂಧನಕ್ಕೆ ಒಳಗಾಗಿ 11 ದಿನ ಆಗಿದೆ ಆದಷ್ಟು ಬೇಗ ಜಾಮೀನು ಪಡೆಯಬೇಕೆಂದು ದರ್ಶನ್ ಪ್ರಯತ್ನಿಸುತ್ತಿದ್ದಾರೆ.
ಆದರೆ ಈ ಪ್ರಯತ್ನಗಳು ಕೈಕೊಡುತ್ತಿಲ್ಲ ದರ್ಶನ್ ಗೆ ಜೈಲಿನಲ್ಲಿ ಪ್ರತಿದಿನ ಕಾಲ ಕಳೆಯುವುದು ಕಷ್ಟ ದ ದಿನಗಳಾಗಿ ಪರಿಣಮಿಸಿದೆ ಚಿತ್ರರಂಗದಲ್ಲಿ ತಮಗೆ ಆಪ್ತರಾಗಿರುವ ಕೆಲವು ನಿರ್ಮಾಪಕರಿಗೆ ಕರೆ ಮಾಡಿ ಜಾಮೂನಿಗಾಗಿ ಒತ್ತಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಪರಪ್ಪನ ಅಗ್ರಹಾರ ಜೈಲಿನಿಂದ ಹಗಲು ರಾತ್ರಿ ಕರೆ ಮಾಡಿ ಜಾಮೀನು ವ್ಯವಸ್ಥೆ ಕೊಡುವಂತೆ ಕೋರಿದ್ದಾರೆ. ವಾರಕ್ಕೆ ಮೂರು ಬಾರಿ ಫೋನ್ ಕರೆ ಮಾಡಲು ಜೈಲಿನ ಸಿಬ್ಬಂದಿ ಅವಕಾಶ ಕೊಟ್ಟಿದ್ದಾರೆ.
ಜೈಲಿನ ಫೋನ್ ಬತ್ನಿಂದ ದರ್ಶನ್ ಕರೆ ಮಾಡಿದ್ದಾರೆ ಆದರೆ ಈವರೆಗೆ ಒಂದೇ ಒಂದು ಬಾರಿಯೂ ಅವರು ತಮ್ಮ ಕುಟುಂಬದವರಿಗೆ ಫೋನ್ ಮಾಡಿಲ್ಲ ಬದಲಿಗೆ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಕರೆ ಮಾಡಿ ಜಾಮನಿಗಾಗಿ ಮನವಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ರಾತ್ರಿಯಾದರೆ ಸಾಕು, ದರ್ಶನ್ ಕಡೆಯಿಂದ ನಿರ್ಮಾಪಕರಿಗೆ ಫೋನ್ ಕರೆಗಳು ಶುರುವಾಗುತ್ತವೆ.
ಜೈಲ್ ನಿಂದ ಹೊರಗೆ ತರುವಂತೆ ದರ್ಶನ್ ಒತ್ತಾಯ ಮಾಡುತ್ತಿದ್ದಾರೆ ಅಕ್ಕಪಕ್ಕದ ಕೈದಿಗಳಿಗೆ ಮೀಸಲಾಗಿದ್ದ ಫೋನ್ ಕರೆಗಳನ್ನು ಕೂಡ ಅವರೇ ಬಳಸುತ್ತಿದ್ದಾರೆ ಜಾಮೀನು ಪಡೆಯಬೇಕು ಎಂಬ ಹಂಬಲ ಅವರಲ್ಲಿ ಹೆಚ್ಚಾಗಿದೆ ಸತತ 11 ದಿನಗಳಿಂದ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರದ ಬಳಿ ಅನೇಕರು ಒತ್ತಾಯ ಮಾಡುತ್ತಿದ್ದಾರೆ. ಪವಿತ್ರಾ ಗೌಡ ಜೊತೆ ದರ್ಶನ್ ಜೈಲು ಸೇರಿ ಕೂಡಲೇ ನಟನೆಯ ಕುಟುಂಬದವರನ್ನು ಭೇಟಿಯಾಗಲು ಬಂದಿರಲಿಲ್ಲ ನಂತರ ಪತ್ನಿ ಅವರನ್ನು ಜೈಲಿಗೆ ಭೇಟಿ ನೀಡಿದ ನಂತರ ಸಹೋದರ ದಿನಕರ ತೂಗುದೀಪ ಮತ್ತು ಅವರ ತಾಯಿ ಮೀನಾ ಕೂಡ ಪರಪನ ಅಗ್ರಹಾರಕ್ಕೆ ಬಂದು ದರ್ಶನ್ ನನ್ನ ಭೇಟಿ ಮಾಡಿ ಮಾತನಾಡಿಸಿದರು ಕುಟುಂಬದವರ ಬೇಟಿಯ ಬಳಿಕ ದರ್ಶನ್ ಅವರಿಗೆ ಸ್ವಲ್ಪ ರಿಲ್ಯಾಕ್ಸ್ ತಂದಿದೆ.
ಜುಲೈ 1 ರಂದು ತಾಯಿ, ತಮ್ಮ, ಪತ್ನಿ, ಅಕ್ಕ ಸೇರಿದಂತೆ ದರ್ಶನ್ ಕುಟುಂಬದ ಹಲವಾರು ಪರಪನ ಅಗ್ರಹಾರಕ್ಕೆ ಭೇಟಿ ನೀಡಿದರು ಇದರಿಂದ ದರ್ಶನ್ ಗೆ ಸ್ವಲ್ಪ ಸಮಾಧಾನ ಆಗಿದೆ ಹಾಗಾಗಿ ರಾತ್ರಿ ಬೇಗನೇ ನಿದ್ರೆಗೆ ಜಾರಿದ್ದ ಅವರು ಇಂದು ಬೆಳಗ್ಗೆ ಬೇಗ ಎದ್ದು ಸೆಲ್ ನಲ್ಲಿ ಕೆಲವೊಂದು ವಾಕಿಂಗ್ ಮಾಡಿದ್ದಾರೆ ಜೈಲ್ ಸಿಬ್ಬಂದಿ, ಬಳೆ ಬಿಸಿನೀರು ಕೇಳಿ ಪಡೆದರು ಜೈಲಿನ ಮೆನುವಿನಂತೆಯೇ ದರ್ಶನ್ ಅವಲಕ್ಕಿ ಉಪ್ಪಿಟ್ಟು ನೀಡಿದ್ದಾರೆ.