ಹೊಸನಗರ : ಸರ್ಕಾರಿ ಬಸ್ ಮತ್ತು ಬ್ಯಾಂಕಿಂಗ್ ಹಣ ಸಾಗಿಸುತ್ತಿದ್ದ ಸಿಎಂ ಎಸ್ ವಾಹನದ ನಡುವೆ ಅಪಘಾತ ಸಂಭವಿಸಿ ಬಸ್ ಕಂದಕಕ್ಕೆ ಬಿದ್ದ ಘಟನೆ ರಾಣೆಬೆನ್ನೂರು ಬೈಂದೂರು ರಸ್ತೆಯ ಗಾಜನೂರು ಕ್ರಾಸ್ ಬಳಿ ನಡೆದಿದೆ. ಬೆಂಗಳೂರಿನಿಂದ ಭಟ್ಕಳ ಕಡೆ ಸಾಗುತ್ತಿದ್ದ ಬಸ್ಸು, ನಿಟ್ಟೂರು ಬ್ಯಾಂಕಿಗೆ ಹಣ ಹಾಕಿ ಬರುತ್ತಿದ್ದ ಬ್ಯಾಂಕ್ ಸಿಎಂಎಸ್ ವಾಹನದ ನಡುವೆ ಬಪ್ಪನಮನೆ ಸಮಗೋಡು ನಡುವೆ ಗಾಜನೂರು ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ, ರಾಷ್ಟ್ರೀಯ ಹೆದ್ದಾರಿಗೂ ಪಕ್ಕದ ಕಂದಕದಲ್ಲಿ ಉರುಳಿದ್ದು ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಹಲವರಿಗೆ ಸಣ್ಣ ಗಾಯಗಳಾಗಿದ್ದರೆ ಗಾಯಾಳುಗಳನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಕೆಳಕ್ಕೆ ಉರುಳುವಂತೆ ಮಾವಿನ ಮರ ತಡೆದು ಸ್ವಲ್ಪ ಹೆಚ್ಚು ಕಮ್ಮಿ ಕಡಿಮೆಯಾಗಿದ್ದರೆ ಸುಮಾರು 50 ಅಡಿ ಆಳದ ಕೆಳಗೆ ಉರುಳಿ ಹೊಳೆ ಪಾಲಾಗುವ ಸಾಧ್ಯತೆ ಇತ್ತು, ಅದೃಷ್ಟವಂತೆ ಭಾರಿ ದುರಂತ ತಪ್ಪಿದೆ.
ಬಸ್ಸಿನ ಚಾಲಕ ದಯಾನಂದ್ ಕಣ್ಣಿಳ್ಳಿ ಕಂಡಕ್ಟರ್ ಕಲ್ಲೇಶ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದ ಬ್ಯಾಂಕ್ ಸಿಎಂ ಎಸ್ ವಾಹನದ ಮುಂಭಾಗ ಜಕಾಮ್ಕೊಂಡಿದೆ ವಾಹನದ ಚಾಲಕ ಮಂಜುನಾಥ್, ಗನ್ ಮ್ಯಾನ್ ತಿಪ್ಪೇಶಿ, ಕಸ್ಟೋಡಿಯನ್ ನಾಗ ಪ್ರಸನ್ನ, ಶಿವಕುಮಾರ್ ಚಾಲಕನ ತಲೆಗೆ ಸ್ವಲ್ಪ ಪೆಟ್ಟಾಗಿದೆ.
ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಎಸ್.ಎಸ್.ಐ ಮಂಜುನಾಥ್ ಬಸ್ ಕೆಳಗೆ ಬಿದ್ದಿರುವುದು ಕಂಡು ಬಂದಿದ್ದು ಕೂಡಲೇ ಮಾಹಿತಿ. ಸ್ಥಳೀಯರ ಸಾಕಾರದಿಂದ ಮೊಗಚಿ ಬಿದ್ದ ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು.
ನಗರ ಪಿಎಸ್ಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಇಲಾಖೆ ಶಾಂತಪ್ಪ ಸಂಜಯ್ ಸೇರಿದಂತೆ ಹಲವಾರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು.