ಬೆಂಗಳೂರು : ಕೆಎಂಎಫ್ ನಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣ ದಲ್ಲಿ ಸಂಭ್ರಮಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಜುಲೈನಲ್ಲಿ 90 ಲಕ್ಷ ಲೀಟರ್ಗೆ ಪ್ರತಿದಿನ ಇತ್ತು ಆದರೆ ಈ ವರ್ಷ ಒಂದು ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ತಲುಪಿದೆ. ಇದೊಂದು ಇತಿಹಾಸದಲ್ಲಿ ದೊಡ್ಡ ಮೈಲುಗಲ್ಲು ನಾನು ಪಶು ಸಂಗೋಪನೆ ಮಂತ್ರಿ ಸ್ವಲ್ಪ ದಿನ ಆಗಿದೆ ಆಗ ಹಾಲು ಯೂನಿಯನ್ ಗೆ ಡೈರಿಗಳನ್ನು ಸೇರಿಸಿದ್ದೆವು ನಮ್ಮಲ್ಲಿ ಈಗ 15 ಯೂನಿಯನ್ಗಳಿವೆ 15 ಡೈರಿಗಳು ಇವೆ ಇವು ಹಾಲು ಮಾರಾಟ ಮಾಡುತ್ತಿವೆ ಎಂದು ತಿಳಿಸಿದರು.
ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡುವುದರಿಂದ 50ml ಆಲೂ ಜಾಸ್ತಿ ಮಾಡಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೆಚ್ಚು ಉತ್ಪಾದನೆ ಆಗಿರೋ ಹಾಲನ್ನು ರೈತರಿಗೆ ಹಾಕಲು ಬೇಡ ಆಗುವುದಿಲ್ಲ. ಹಸು ಸಾಕೋರು ರೈತರು ಹೀಗಾಗಿ ಹಾಲು ಬೇಡ ಅನ್ನುವುದಕ್ಕೆ ಆಗೋಲ್ಲ. ರೈತರಿಗೆ ಸಹಾಯ ಮಾಡಲು ಎರಡು ರೂಪಾಯಿ 50 ml ಜಾಸ್ತಿ ಮಾಡಿದ್ದೇವೆ ಹಾಲಿನ ಕ್ವಾಲಿಟಿ ಜಾಸ್ತಿ ಮಾಡಿ ಹಣ ಜಾಸ್ತಿ ಮಾಡಿದ್ದೇವೆ ಇದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳದೆ ಹಾಲುಬಲೇ ಜಾಸ್ತಿ ಮಾಡಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಅವರು ರೈತರ ವಿರೋಧಿಗಳು ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಒಂದು ಕೋಟಿ ಲೀಟರ್ ಹಾಲು ಅಂದರೆ ಒಂದು ದಿನಕ್ಕೆ 5 ಕೋಟಿ ಪ್ರೋತ್ಸಾಹ ಧನವನ್ನು ಸರ್ಕಾರ ಕೊಡುತ್ತಿದೆ ಇದನ್ನು ರೈತರಿಗೆ ಸಹಾಯ ಮಾಡುತ್ತಿದ್ದೇವೆ ಇಂದೇ ನಾನೇ ರೈತರಿಗೆ ಎರಡು ರೂಪಾಯಿನಿಂದ ಐದು ರೂಪಾಯಿಗೆ ಸಹಾಯಧನ ಏರಿಕೆ ಮಾಡಿದೆ ಅಶೋಕ್ ಗೆ ಏನು ಗೊತ್ತಿಲ್ಲ. ಬೆಲೆ ಹೆಚ್ಚಳ ಅಂದ್ರೆ ನಾವು ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ ಹಾಲಿನ ಪ್ರಮಾಣ ಜಾಸ್ತಿ ಮಾಡಿ ಹಣ ಜಾಸ್ತಿ ಮಾಡಿದ್ದೇವೆ ಪಕ್ಷದ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮದೇ ಕಡಿಮೆ ಇದೆ ಬಾಕಿ ಉಳಿದಿರೋ ಹಾಲಿನ ಸಬ್ಸಿಡಿ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದವರು ಅದನ್ನು ಕೊಡುತ್ತೇವೆ ಬಿಜೆಪಿ ಅವಧಿಯಲ್ಲಿ ಬಾಕಿ ಇದ್ದಿದ್ದು ಅದು ನಾವು ಬಿಜೆಪಿಯವರನ್ನು ಪ್ರಶ್ನೆ ಮಾಡಿದ್ರಾ ಅಂತ ಮರು ಪ್ರಶ್ನೆ ಕೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಒಂದು ಕೋಟಿ ಆಲೂ ಶೇಖರಣ ಫಲಕಕ್ಕೆ ಬೆಲ್ ಹೊಡೆದು ಗೋವಿಗೆ ಪೂಜೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಸಚಿವರಾದ ಚೆಲುವನಾರಾಯಣ ಸ್ವಾಮಿ, ರಾಜಣ್ಣ, ಬೈರತ ಸುರೇಶ್ ,ಜಮೀರ್ ಅಹ್ಮದ್, ಕೆಎಂಎಫ್ ಅಧ್ಯಕ್ಷ ಭೀಮ ನಾಯಕ್, ಮಾಜಿ ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವಾರು ಶಾಸಕರು ಭಾಗಿಯಾಗಿದ್ದರು.