ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮೂಡದಲ್ಲಿ ನೀಡಲಾಗಿರುವ ನಿವೇಶನ ಕಾನೂನು ಪ್ರಕಾರವೇ ನೀಡಲಾಗಿದೆ ಬಿಜೆಪಿ ಅವಧಿಯಲ್ಲಿ ಈ ನಿವೇಶನ ಹಂಚಿಕೆಯಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪತ್ನಿ ಹೆಸರಿಗೆ ಮೂಡಾ ನಿವೇಶನ ಹಂಚಿಕೆ ಆಗಿರೋ ವಿಚಾರ ವಿವಾದಕ್ಕೆ ಪ್ರತಿಕ್ರಿಯೆಸಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ಅವಧಿಯಲ್ಲಿ ಕೊಟ್ಟಿರೋ ನಿವೇಶನ ಇದು ನನ್ನ ಭಾಮೈದ ತನ್ನ ಜಾಗವನ್ನು ನನ್ನ ಹೆಂಡತಿಗೆ ಅರಿಶಿನ ಕುಂಕುಮಕ್ಕೆ ಅಂತ ಗಿಫ್ಟ್ ಮಾಡಿದ್ದರು.
ಈ ಜಾಗವನ್ನು ಮೂಡದವರು ಯಾವುದೇ ಮಾಹಿತಿ ಇಲ್ಲದೆ ಅಕ್ವಯರ್ ಮಾಡಿಕೊಂಡು ಸೈಟ್ ಮಾಡಿದ್ರು ಆಗ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ನಾವು ಕೇಳಿದಾಗ ಬದಲಿ ನಿವೇಶನ ಕೊಡುವುದಾಗಿ ಹೇಳಿದ್ರು, ಅದರಂತೆ 50 : 50 ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಿದೆ ಇದು ತಪ್ಪಾ ಎಂದು ಪ್ರಶ್ನೆ ಮಾಡಿದ್ರು.
ನಿವೇಶನ ಹಂಚಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಹಾಗಿಲ್ಲ ಕಾನೂನು ಪ್ರಕಾರವೇ ಇದು ಹಂಚಿಕೆಯಾಗಿದೆ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಅಂತ ತಮ್ಮ ಪತ್ನಿಗೆ ಹಂಚಿಕೆ ಆಗಿರೋ ನಿವೇಶನದ ವಿಷಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.