ಬೀದರ್ : ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಯುತ್ತಿದ್ದ ಕನ್ನಡ ಕೃಷಿ ಡಿಪ್ಲೋಮೋ ಕೋರ್ಸ್ ಪ್ರಾಸ್ತಕ ವರ್ಷದಿಂದ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ. ಈ ಭಾಗದ ರೈತರ ಮಕ್ಕಳಿಗೆ ಸಹಾಯಕವಾಗಲೆಂದು 2012ರಲ್ಲಿ ಸಂಶೋಧನಾ ಕೇಂದ್ರ ಆವರಣದಲ್ಲಿ ಕೃಷಿ ಡಿಪ್ಲೋಮೋ ಕೋರ್ಸ್ ಆರಂಭಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಅಡಿಯಲ್ಲಿ ಎಸ್ ಎಸ್ ಎಲ್ ಸಿ ಬಳಿಕ ವಿದ್ಯಾರ್ಥಿಗಳು ಎರಡು ವರ್ಷದ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದರು. ಕಳೆದ ವರ್ಷವೂ ಎರಡು ತರಗತಿ ಸೇರಿ 90 ಕ್ಕೂ ಅಧಿಕ ವಿದ್ಯಾರ್ಥಿಗಳು ಓದಿದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿತ್ತು. ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು ಕಳೆದ ದಶಕಗಳಿಂದ ಯಶಸ್ವಿಯಾಗಿ ಕೋರ್ಸ್ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಈಗ ಸರ್ಕಾರ ಈ ಕೋರ್ಸ್ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರಕ್ಕೆ ಡಿಪ್ಲೋಮೋ ಕಾಲೇಜ್ ನಡೆಸಲು ದುಡ್ಡಿಲ್ಲ ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳೆ ಬಂದ್ ಆಗಲು ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಆರಾಧ್ಯ ಜಾವಿದ್ ಪ್ರತಿಕ್ರೀಯಿಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೃಷಿ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಎರಡು ವರ್ಷದಿಂದ ಡಿಪ್ಲೋಮ ಕೋರ್ಸ್ ಗಳಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನವರೆ ಬೀಳುವುದಿಲ್ಲ.
ಸರ್ಕಾರ ಕೃಷಿ ಡಿಪ್ಲೋಮೋ ಕಾಲೇಜ್ ಬಂದ್ ಮಾಡುವುದರಿಂದ ಎಲ್ಲಾ ಉಪಕರಣಗಳು ತೊಕ್ಕು ಹಿಡಿಯುತ್ತದೆ. ಕ್ಲಾಸ್ ಗಳು ದೂಳು ತಿನ್ನುತ್ತವೆ 12 ವರ್ಷದಿಂದ ನಡೆಯುತ್ತಿದ್ದ ತರಗತಿಗಳು ಬಂದಾಗಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಭಾರಿ ನಷ್ಟವಾಗಿದೆ. ಈ ಬಗ್ಗೆ ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ಗಮನಿಸಿ ಕೃಷಿ ಡಿಪ್ಲೋಮೋ ಕೋರ್ಸ್ ಆರಂಭಕ್ಕೆ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.