ಚಿತ್ರದುರ್ಗ : ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವ ಉದ್ಯೋಗವನ್ನು ಕಲ್ಪಿಸಲೆಂದೇ ನಗರದ ರೋಡ್ ಸೆಟ್ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿಯನ್ನ ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿಯಲ್ಲಿ ತರಬೇತಿಗಾರರಿಗೆ ಉಚಿತ ಊಟ ಮತ್ತು ವಸತಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ.
1.ಎಲೆಕ್ಟ್ರಾನಿಕ್ ರಿವೈಂಡಿಂಗ್ ಮತ್ತು ಪಂಪ್ಸೆಟ್ ರಿಪೇರಿ ತರಬೇತಿ 2. ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಯನ್ನು ಜುಲೈ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಸಂದರ್ಶನಕ್ಕೆ ದಿನಾಂಕ 13-07-2024 ರಂದು ಸ್ಥಳ ರೋಡ್ ಸೆಟ್ ಸಂಸ್ಥೆಯ ಆವರಣ ಚಿತ್ರದುರ್ಗ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445 ,9449732805 ಲ್ಯಾಂಡ್ ಲೈನ್ ಫೋನ್ ನಂಬರ್ : 08194223505
ತರಬೇತಿಗಳಿಗೆ ಅಭ್ಯರ್ಥಿಗಳ ಅರ್ಹತೆ ಈ ಕೆಳಗಿನಂತಿರಬೇಕು. 19 ವರ್ಷದಿಂದ 45 ವರ್ಷದೊಳಗೆ ಇರಬೇಕು.
ಕನ್ನಡ ಓದು ಬರಹ ಬಲ್ಲರಾಗಿರಬೇಕು. ಈ ತರಬೇತಿಗೆ ಸಂಬಂಧಪಟ್ಟ ಕೌಸಲ್ಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಆಸಕ್ತರು ತಮ್ಮ ವಿಳಾಸ ಫೋನ್ ಅಥವಾ ಮೊಬೈಲ್ ನಂಬರ್ ಉಳ್ಳ ಸ್ವ ವಿವರ ಅರ್ಜಿಗಳೊಂದಿಗೆ ದಿನಾಂಕ : 13-07-2024 ರಂದು ಚಿತ್ರದುರ್ಗ ನಗರ ರೂಟ್ ಸೆಟ್ ಸಂಸ್ಥೆಯ ಕಚೇರಿಯಲ್ಲಿ ನೇರ ಸಂದರ್ಶನದಲ್ಲಿ ಭಾಗವಹಿಸಲು ಈ ಮೂಲಕ ತಿಳಿಸಲಾಗುತ್ತದೆ.
ತರಬೇತಿಗೆ ಅಭ್ಯರ್ಥಿಗಳಿಂದ ಆಯ್ಕೆ ಪ್ರಕ್ರಿಯೆಯನ್ನು ನೇರ ಸಂದರ್ಶನದ ಮೂಲಕ ನಡೆಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445, 9449732805 / 08194 – 223505