ಚಿತ್ರದುರ್ಗ : ಪರಿಸರ ಕಾಳಜಿ ಕುರಿತು ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ 31ನೇ ವಾರ್ಡ್ನಲ್ಲಿ ಬರುವ ಬ್ಯಾಂಕ್ ಕಾಲೋನಿ ಸೇಮಾಭಿವೃದ್ಧಿ ಸಂಘದ ವತಿಯಿಂದ ಸಸಿಗಳನ್ನು ಬಿಜೆಪಿ ರಾಜ್ಯ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಉಮೇಶ್ ಕಾರಜೋಳ ಉದ್ಘಾಟಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಕಾಶ್ ವಾಣಿಯಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಹೆತ್ತ ತಾಯಿಯ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಹೆತ್ತ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ನಮಗೆ ಉಸಿರು ನೀಡುವ ಪರಿಸರವನ್ನು ರಕ್ಷಿಸುವ ಪವಿತ್ರ ಕಾರ್ಯವನ್ನು ಕೈಗೊಳ್ಳುವಂತೆ ಮೋದಿಜಿ ಅವರು ಕರೆ ನೀಡಿದ್ದಾರೆ.
ನಿಸರ್ಗ ಸಹ ತಾಯಿ ಸ್ವರೂಪಿ ಹೀಗಾಗಿ ಪರಿಸರ ರಕ್ಷಣೆ ಆದಿಯ ಕರ್ತವ್ಯ ದಿನನಿತ್ಯದ ಕಾಯಕವಾಗಬೇಕು ಎಂದರು. ಕೇವಲ ನಾವು ಸಸಿ ನೆಟ್ಟರೆ ಸಾಲದು ಅವುಗಳನ್ನು ಪೋಷಿಸುವುದು ಅಷ್ಟೇ ಮುಖ್ಯ ಮಾನವನ ಪರಿಸರ ವಿರೋಧಿ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಇದರಿಂದ ನಿರಪರಾಧಿ ಉಳಿಸುವ ಜೀವಿಗಳಿಗೂ ತೊಂದರೆಯಾಗುತ್ತದೆ.
ಸಸಿ ನೆಡುವುದು ನಮ್ಮ ದೈನಂದಿನ ಜೀವನದಲ್ಲಿ ಭಾಗವಾಗಬೇಕು ಗಿಡಗಳಿಗೆ ನೀರುಣಿಸುವುದು ಎಲೆಗಳಿಗೆ ರೋಗ ತಾಕದಾಗೆ ಪರೀಕ್ಷಿಸುವುದು ಎಲ್ಲರಿಗೂ ಸಸಿ ನಡೆ ಎಂದು ಹೇಳುವುದು ಸಹ ನಮ್ಮ ಪರಿಸರ ಸಂರಕ್ಷಣೆಯ ಭಾಗ ಎಂದರು
. ಈ ಸಂದರ್ಭದಲ್ಲಿ ಡಾಕ್ಟರ್ ರವಿಪ್ರಕಾಶ್ ರೆಡ್ಡಿ, ರಮೇಶ್ ಪಾಂಡುರಂಗ ರೆಡ್ಡಿ, ಬಿ ಎಂ ಪಾಲಯ್ಯ, ತಿಮ್ಮೇಶ್, ಆದರ್ಶ, ತಿರುಮಲ ಲಕ್ಷ್ಮಿ, ಅನಿತಾ, ಸುಧಾ, ಸುಮಿತ್ರಮ್ಮ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.