ವಿಜಯನಗರದ ಜಿಲ್ಲಾಧಿಕಾರಿ ಎಂಎಸ್ ದಿನಕರ್ ಹಗರಿ ಬೊಮ್ಮೇನಹಳ್ಳಿಯಲ್ಲಿ ಜನತಾದರ್ಶನ ನಡೆಸಿದರು ಇದಕ್ಕೂ ಮೊದಲು ಅವರು ಸೈಕಲ್ ಮೂಲಕ ನಗರ ಪ್ರದಕ್ಷಣೆ ಮಾಡಿದರು. ನಂತರ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ವಿಜಯನಗರ ಜಿಲ್ಲಾಧಿಕಾರಿ ಎಂ ಎಸ್ ದಿನಕರ್ ಅವರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ ವಿತರಣ ಪ್ರಕ್ರಿಯೆಯನ್ನು ಪರಿಶೀಲಿಸಿ, ಕ್ಯೂಆರ್ ಕೋಡ್ ಮೂಲಕ ಬೀಜ ಗೊಬ್ಬರ ವಿತರಣಾ ವ್ಯವಸ್ಥೆ ಪ್ರತಿಕ್ರಿಯೆಯನ್ನು ಪರಿಶೀಲನೆ ಮಾಡಿ ವ್ಯವಸ್ಥೆಯನ್ನು ವೀಕ್ಷಿಸಿ ಪ್ರಶಂಸಿದ್ದರು.
ನಂತರ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿ ಶಾಲೆಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು ಮತ್ತು ಪಠ್ಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಯಾವುದೇ ರೀತಿ ತೊಂದರೆಗಳು ಇಲ್ಲ ಎಂದು ತಿಳಿದರು ನಂತರ ವಿದ್ಯಾರ್ಥಿಗಳ ಜೊತೆ ಮಾತುಕತೆ ಸಂವಾದ ನಡೆಸಿದರು.
ಹಗರಿಬೊಮ್ಮೇನಹಳ್ಳಿ ಎಲ್ಲಿ ಸೈಕಲ್ ಮೂಲಕ ನಗರದ ಪ್ರದಕ್ಷಣೆ ನಡೆಸಿ ವಿಜಯನಗರದ ಜಿಲ್ಲಾಧಿಕಾರಿ ಎಂ ಎಸ್ ದಿನಕರವರು ಜನರು ಸ್ವಾಗತಿಸಿ ತಮ್ಮ ಹವಾಲುಗಳನ್ನು ಸಲ್ಲಿಕೆ ಮಾಡಿದರು. ನಂತರ ಜನತಾದರ್ಶನ ಕಾರ್ಯಕ್ರಮಕ್ಕೂ ಭೇಟಿ ನೀಡಿ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಅವರ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿ ಅರ್ಜಿಯನ್ನು ಸ್ವೀಕರಿಸಿ ಅವರಿಗೆ ಸ್ಥಳದಲ್ಲಿಯೇ ಪರಿಹಾರ ಆಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಿದರು. ನಂತರ ವಿವಿಧ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರ ದೂರುಗಳಿಗೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅವರ ಕಷ್ಟ ಗಳನ್ನು ಹೇಳಿಕೊಂಡು ಬಂದ ಕಚೇರಿಗೆ ಹಿಂತಿರುಗಿಸಿದರೆ ಅವರಿಗೆ ಅಲ್ಲಿಯೇ ಪರಿಹಾರ ಕೊಡಬೇಕೆಂದು ತಾಕಿತು ಮಾಡಿದರು.