ಚಿತ್ರದುರ್ಗ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಮತ್ತು ವಿಶ್ವ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ವಿರೋಧಿ ದಿನ ಉದ್ಘಾಟಿಸಿ ಡ್ರಗ್ ಸೇವನೆ ಮತ್ತು ಮಾರಾಟದಿಂದ ದೇಶವೇ ಹಾಳಾಗುತ್ತದೆ.
ಹಾಗಾಗಿ ಯುವ ಪೀಳಿಗೆ ದುಶ್ಚಟದಿಂದ ದೂರವಿರಿ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಯುವ ಜನತೆ ಹಾಗೂ ವಿದ್ಯಾರ್ಥಿಗಳು ಮಧ್ಯಪಾನ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ ಆದ್ದರಿಂದ ಹೊರಬರುವುದು ತುಂಬಾ ಕಷ್ಟ ಮನಸ್ಸು ಸಮಾಜದ ಆರೋಗ್ಯ ಪೂರ್ಣವಾಗಬೇಕಾದರೆ ಯುವ ಪೀಳಿಗೆ ಇಂತಹ ಚಟ್ಟಗಳಿಂದ ದೂರವಿರಬೇಕು.
ಮೊಬೈಲ್ ಚಟ ಡ್ರಸ್ ಗಿಂತಲೂ ಅಪಾಯಕಾರಿ ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಮೊಬೈಲ್ಗಳನ್ನು ಬಳಸಿ ಅದನ್ನು ಬಿಟ್ಟು ದಿನವಿಡಿ ಮೊಬೈಲ್ ನಲ್ಲಿ ಮುಳುಗುವುದು ಸರಿಯಲ್ಲ. ಮೊಬೈಲ್ ಚಟಕ್ಕೆ ಬಲಿಯಾಗುವುದಾದರೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ ಒಂದು ಸಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾ ಅಂತಾರೆ ಭಾರತದಲ್ಲಿ ನೀವು ಎಲ್ಲಿ ಬೇಕಾದರೂ ಅಪರಾಧಿಗಳೇ ಸರ್ಕಾರಿ ಕೆಲಸ ಪಾಸ್ಪೋರ್ಟ್ ಹೀಗೆ ಯಾವುದನ್ನೇ ಪಡೆಯಲು ಪೋಲಿಸ್ ರಿಪೋರ್ಟ್ ಬೇಕಾಗುತ್ತದೆ. ಹಾಗಾಗಿ ಕೆಟ್ಟ ಕೆಲಸಗಳಿಗೆ ಕೈಹಾಕಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಶಿಕ್ಷಣವಂತರಾಗುವ ಮೂಲಕ ಒಳ್ಳೆಯ ಪ್ರಜೆಗಳಾಗಿ ತಂದೆ ತಾಯಿ ಗುರುಹಿರಿಯರಿಗೆ ಗೌರವ ತರಬೇಕೆಂದು ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಡೆ ಅವರು 1982 ರಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಯನ್ನು ಹುಟ್ಟು ಹಾಕಿದ್ದಾರೆ ಹಂದಿನಿಂದ ಇಂದಿನವರೆಗೆ ಗ್ರಾಮೀಣಗಳ ಬಗ್ಗೆ ಅವರ ಹೇಳಿಕೆಗೆ ಸಾಕಷ್ಟು ಯೋಜನೆಯನ್ನು ನೀಡಿದ್ದಾರೆ ಜನಜಾಗೃತಿ ವೇದಿಕೆಯ ಅಡಿಯಲ್ಲಿ ಮುತುವರ್ಜಿ ವೈಸಬೇಕಾದ ಸಲಹೆಗಳು ಮತ್ತು ಶಿಬಿರಗಳನ್ನು ನಡೆಸಿ 1,30,000 ಮಂದಿಯನ್ನು ಕುಡಿತದ ಚಟದಿಂದ ಹೊರಗೆ ತರಲಾಗಿದೆ ಸ್ವಾಸ್ಯ ಸಂಕಲ್ಪ ಯೋಜನೆ ಅಡಿಯಲ್ಲಿ 1800 ಶಿಬಿರಗಳನ್ನು ನಡೆಸಿ 14 ಲಕ್ಷ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದೇವೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಇಲ್ಲಿಗೆ ಬಂದು 13 ವರ್ಷಗಳಾಗಿವೆ 50 ಶಿಬಿರಗಳನ್ನು ನಡೆಸುವುದರಿಂದ 3000 ಮಂದಿ ಮನ ಪರಿವರ್ತನೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 6 ಲಕ್ಷ 40,000 ಸ್ವಸಾಯ ಸಂಘಗಳಿವೆ ಜಿಲ್ಲೆಯಲ್ಲಿ 16 ಶಾಲೆಗಳಿಗೆ ಗೌರವ ಶಿಕ್ಷಕರನ್ನು ನೀಡಿದ್ದೇವೆ ಸುಜ್ಞಾನ ನಿಧಿ ಅಡಿಯಲ್ಲಿ ಪ್ರಜ್ಞಾವಂತರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ ಕೆರೆಗಳ ಊಳೆತ್ತುವುದು 400 ವರ್ಷದ ಗಂಗಾ ಘಟಕ ಹದಿನೈದು ಸಾವಿರ ನಿರ್ಗತಿಕ ಕುಟುಂಬಕ್ಕೆ ಪ್ರತಿ ತಿಂಗಳ ಮಾಶಾಸನ ನೀಡುವುದಲ್ಲದೆ ಪ್ರತಿವರ್ಷ ಬಡವರಿಗೆ 100 ಮನೆಗಳನ್ನು ಕಟ್ಟಿಸಿಕೊಡಲಾಗುತ್ತದೆ ಇದೆಲ್ಲಾ ವೀರೇಂದ್ರ ಹೆಗಡೆಯವರ ಸಾಧನೆ ಎಂದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಾದ ಎಚ್ ಬಿ ನರಸಿಂಹಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಕೆಆರ್ ಮಂಜುನಾಥ್, ಸದಸ್ಯರುಗಳಾದ ನಾಗರಾಜ್ ಸಂಗಮ್, ಶ್ರೀಮತಿ ರೂಪ ಜನಾರ್ಧನ್, ಮಹಮ್ಮದ್ ನೋರುಲ್ಲಾ, ಕಿರಣ್ ಶಂಕರ್, ಡಿವೈಎಸ್ಪಿ ದಿನಕರ್ ಇವರು ವೇದಿಕೆಯಲ್ಲಿದ್ದರು.
ಕೃಷಿ ಮೇಲ್ವಿಚಾರಕ ಸುರೇಶ್ ಜನಜಾಗೃತಿ ಯೋಜನೆ ಅಧಿಕಾರಿ ನಾಗರಾಜ್, ಮೇಲ್ವಿಚಾರಕ ಬಾಲಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಸಲ್ಲಿಸಿದರು. ತಾಲೂಕು ಯೋಜನಾಧಿಕಾರಿ ಬಿ ಅಶೋಕ್ ಸ್ವಾಗತ ಭಾಷಣವನ್ನು ಮಾಡಿದರು.