ವಿಜಯವಾಡ : ತೆಲುಗು ರಾಜ್ಯಗಳಲ್ಲಿ ಹರ್ಷ ಸಾಯಿ ಎಂಬ ವ್ಯಕ್ತಿಯ ಬಗ್ಗೆ ಗೊತ್ತಿರದ ವ್ಯಕ್ತಿಗೆ ಇಲ್ಲ. ಇವರು ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಡವರಿಗೆ ಟಿವಿ ಫ್ರಿಡ್ಜ್ ಕೊಡಿಸುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ.
ಈ ಕಾರಣದಿಂದ ಹರ್ಷ ಸಾಯಿ ಅವರ ಫಾಲೋವರ್ಸ್ ಸಂಖ್ಯೆ ಬಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಇದೇ ಕ್ರೇಜಿನೊಂದಿಗೆ ಸಿನಿಮಾವನ್ನು ಕೂಡ ಆರಂಭಿಸಿದ್ದಾರೆ ಹರ್ಷ ಸಾಯಿಗೆ ಎಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಬಡವರಿಗೆ ಲಕ್ಷಾಂತರ ರೂಪಾಯಿ ಹಂಚಲು ಆದಾಯದ ಮೂಲ ಯಾವುದು? ಸೋಶಿಯಲ್ ಮೀಡಿಯಾದಿಂದ ಅಷ್ಟೊಂದು ಹಣ ಬರುತ್ತಾ ಇತ್ಯಾದಿ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಕಾಡುವ ಪ್ರಶ್ನೆಯಾಗಿ ಉಳಿದಿದೆ.
ಈ ಪ್ರಶ್ನೆಗಳ ನಡುವೆಯೇ ಒಂದಿಷ್ಟು ಆರೋಪಗಳು ಕೂಡ ಹರ್ಷ ಸಾಯಿ ವಿರುದ್ಧ ಕೇಳಿಬಂದಿದೆ ಈ ಹರ್ಷ ಸಾಯಿ ಜನರು ಅಂದುಕೊಂಡಷ್ಟು ಒಳ್ಳೆಯವರಲ್ಲ ಆತ ಮೋಸಗಾರ ಎಂದು ರವಿ ವರ್ಕ್ ಅಲಿಯಾಸ್ ಯುವ ಸಾಮ್ರಾಟ ರವಿ ಎಂಬುವರು ಕಳೆದ ಮೂರು ವರ್ಷಗಳಿಂದ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಅನೇಕ ಸಂದರ್ಶನಗಳಲ್ಲಿಯೂ ಹರ್ಷ ಸಾಯಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದಾರೆ ಆದರೆ ಇತ್ತೀಚಿಗೆ ಮಾಧ್ಯಮ ಸಂದರ್ಶನ ಒಂದರಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಮುಖ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿಮಾರ್ಕ್ ಅವರು ಸ್ಪೆಷಲ್ ಕಾಮೆಂಟ್ ಮಾಡಿದ್ದಾರೆ ಹರ್ಷ ಸಾಯಿ ಹಿಂದೆ ಒಂದು ದೊಡ್ಡ ಮಾಫಿಯನ್ನೇ ನಡೆಸುತ್ತಿದ್ದಾನೆ. ಎಂದು ಆರೋಪ ಮಾಡಿದ್ದಾರೆ ಈತನ ಹಿಂದೆ ನೋಯ್ಡಾದ ದೊಡ್ಡ ಗ್ಯಾಂಗ್ ಇದೆ ಸಾಫ್ಟ್ವೇರ್ ಕಂಪನಿಯಲ್ಲಿ ಇದ್ದುಕೊಂಡು ಅಕ್ರಮ ಬೆಟ್ಟಿಂಗ್ ಗೆ ಉತ್ತೇಜನ ನೀಡುತ್ತಿದ್ದಾರೆ. 10,000 ಅಥವಾ 20,000 ಪರಿಹಾರಗಳನ್ನು ಹೊಂದಿದ್ದರೆ ಬೆಟ್ಟಿಂಗ್ ಕಂಪನಿಯು ಅವರನ್ನು ಸಂಪರ್ಕಿಸಿ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡಲು ಉತ್ತೇಜಿಸುತ್ತದೆ.
ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ಹರ್ಷ ಸಾಯಿ ಕನಿಷ್ಠ 90 ಲಕ್ಷ ತೆಗೆದುಕೊಳ್ಳುತ್ತಾರೆ ಈ ಹಣದಲ್ಲಿ 60 ಲಕ್ಷ ಜಿಎಸ್ಟಿ ಮತ್ತು ಉಳಿದ 40 ಲಕ್ಷ ಅವರ ಖಾತೆಗೆ ಹೋಗುತ್ತದೆ. ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡಲು ಹರ್ಷ ಸಾಯಿ ಬಡಜನರನ್ನು ಬಳಸಿಕೊಳ್ಳುತ್ತಿದ್ದಾರೆ ಒಳ್ಳೆಯ ನೆನೆಸಿದರೆ ಮಾತ್ರ ಜನ ನಂಬುತ್ತಾರೆ. ಜನ ನಂಬಿಕೆಗೆ ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಕೊಡುತ್ತಾರೆ ಒಂದು ವಿಡಿಯೋದಲ್ಲಿ ಬೆಟ್ಟಿಂಗ್ ಆಪ್ ಪ್ರಚಾರ ಮಾಡಿದರೆ 40 ಲಕ್ಷ ಸಿಗುತ್ತದೆ ಇನ್ನು ಅಂತಹ ವಿಡಿಯೋಗಳಲ್ಲಿ ಎಷ್ಟು ಆಪ್ ಎಷ್ಟು ಬಾರಿ ಪ್ರಚಾರ ಮಾಡಿದರೆ ಎಷ್ಟು ಹಣ ಸಿಗುತ್ತದೆ ಎಂಬುದನ್ನು ನೀವೇ ವಹಿಸಿಕೊಳ್ಳಿ ಎಂದು ರವಿ ತಿಳಿಸಿದರು.
ತನ್ನ ವಿರುದ್ಧ ಗಂಭೀರ ಆರೋಪಗಳಿಗೆ ಸಂದರ್ಶನ ಒಂದರಲ್ಲಿ ಹರ್ಷ ಸಾಯಿ ಖಡಕ್ ಉತ್ತರ ನೀಡಿದ್ದಾರೆ ನಾನು ಅಕ್ರಮ ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡುತ್ತಿಲ್ಲ ಬದಲಾಗಿ ಅಕ್ರಮವಲ್ಲದ ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡುತ್ತಿದ್ದೇನೆ ಎಂದು ಹರ್ಷ ಸಾಯಿ ಸಮರ್ಥಿಸಿಕೊಂಡಿದ್ದಾರೆ ಪ್ರಚಾರ ಮಾಡುವುದು ತಪ್ಪಾದರೆ ಅದನ್ನು ಏಕೆ ನಿಷೇಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಟಿಕ್ ಟಾಕ್ ಆಪ್ ಅನ್ನು ಬ್ಯಾನ್ ಮಾಡಲಾಗಿದೆ ಬೆಟ್ಟಿಂಗ್ ಆಪ್ ಗಳನ್ನು ನಿಷೇಧಿಸಿದರೆ ಯಾವುದೇ ತೊಂದರೆಯಾಗದು ಎಂದರು ಆದರೆ ದೊಡ್ಡ ಸೆಲೆಬ್ರೆಟಿಗಳು ಮಾಡುವ ಕೆಲಸಗಳಿಗೆ ಹೋಲಿಸಿದರೆ ನಾವು ಮಾಡುವುದು ತುಂಬಾ ಚಿಕ್ಕದು ಬೆಟ್ಟಿಂಗ್ ಹ್ಯಾಪ್ಗಳನ್ನು ಪ್ರಚಾರ ಮಾಡಿದರೆ ನಮಗೆ ಹಣ ಬರುತ್ತದೆ ಸಣ್ಣ ಪುಟ್ಟ ಸೋಶಿಯಲ್ ಮೀಡಿಯಾ ಇನ್ಸ್ಟಾಲ್ ಗ್ರಾಂ ಫಾಲ್ಲೋ ಆಗುತ್ತದೆ ಹಕ್ಕು ಇಲ್ಲದೆ ಪ್ರಚಾರ ಮಾಡುತ್ತಾರೆ ಆದರೆ ನಾವು ತುಂಬಾ ಎಚ್ಚರಿಕೆವಹಿಸಿ ಜನರಿಗೆ ಎಚ್ಚರಿಕೆ ಸಂದೇಶಗಳನ್ನು ನೀಡುತ್ತೇವೆ ಎಂದು ಹರ್ಷ ಸಾಯಿ ಹೇಳಿದ್ದಾರೆ.
ಕೆಲವರು ಟೆಲಿಗ್ರಾಂ ಗ್ರೂಪುಗಳಲ್ಲಿ ಜನರನ್ನು ಆಹ್ವಾನಿಸಿ ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಕಳೆದುಕೊಳ್ಳುವಂತೆ ಮಾಡುತ್ತಾರೆ ಆದರೆ ನಾವು ಈ ರೀತಿ ಮಾಡುವುದಿಲ್ಲ ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡಿದರೆ ನಷ್ಟವಾಗುತ್ತದೆ ಆಕೆಯೇ ನಾವು ಬೆಟ್ಟಿಂಗ್ ಹ್ಯಾಪ್ಗಳನ್ನು ಜವಾಬ್ದಾರಿಯುತವಾಗಿ ಪ್ರಚಾರ ಮಾಡುತ್ತೇವೆ ಎಂದು ಹರ್ಷ ಸಾಯಿ ಪ್ರತಿಕ್ರಿಯಿಸಿದ್ದಾರೆ.