ಬೆಂಗಳೂರು : ಇತ್ತೀಚಿಗೆ ಹೆಚ್ಚಾಗಿ ಬೈಕ್ ಸವಾರರಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗುತ್ತಿದೆ ಎಂದು ನಗರದ ವಿವಿಧಡೆ ಅಪಘಾತಗಳು ಹೆಚ್ಚಾಗಿದ್ದು, ಇದುವರೆಗೆ ಬೈಕ್ ಸವಾರರೇ ಮೇಲ್ಗೈ ಸಾಧಿಸಿದ್ದಾರೆ. ಇದರಿಂದ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ನಿನ್ನೆ ದಿನವಿಡಿ ವಿಶೇಷ ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ 851 ಪ್ರಕರಣಗಳು ದಾಖಲಾಗಿವೆ. ಬರಬ್ಬರಿ 4.33 ಲಕ್ಷ ದಂಡ ಹಾಕಿದ್ದಾರೆ.
ಈ ಕಾರ್ಯಾಚರಣೆ ವೇಳೆಯಲ್ಲಿ ಬೈಕ್ ಸವಾರ ಬೇಜವಾಬ್ದಾರಿ ಚಾಲನೆ ಮಾಡಿ ಪತ್ತೆಯಾಗಿದ್ದು ಹೆಲ್ಮೆಟ್ ಇಲ್ಲ ರಾಂಗ್ ರೂಟ್ ನಲ್ಲಿ ಓಡಾಟ ಸೇರಿದಂತೆ ನಾನು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಕೇಸುಗಳು ಪತ್ತೆಯಾಗಿವೆ. ನೆನ್ನೆ ಒಂದೇ ದಿನ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ವಿರುದ್ಧ 500ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ.
ಹೆಲ್ಮೆಟ್ ಹಾಕದ ಬೈಕ್ ಚಾಲನೆ ಮಾಡಿದವರ ವಿರುದ್ಧ ಬರೋಬರಿ ಎರಡುವರೆ ಲಕ್ಷಕ್ಕೊ ಅಧಿಕ ದಂಡ ಹಾಕಲಾಗಿದೆ. ನೆನ್ನೆ ಕಾರ್ಯಚರಣೆಯ ದಂಡದ ವಿವರದಲ್ಲಿ ಬೈಕ್ ಸವಾರ ಪಟ್ಟಿ ಹೆಚ್ಚು ಅಪರಾಧಗಳು ದಾಖಲಾಗಿವೆ.
- ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ 511 ಕೇಸುಗಳು ಸಂಬಂಧ 2,51,500 ದಂಡ ವಿಧಿಸಲಾಗಿದೆ.
- ವನ್ ವೇ ರಾಂಗ್ ರೂಟ್ನಲ್ಲಿ 55 ಕೇಸ್ ಸಂಬಂಧ 27,600 ತಂಡ ವಿಧಿಸಲಾಗಿದೆ.
- ರಾಂಗ್ ಪಾರ್ಕಿಂಗ್ ಕೇಸ್ ನಲ್ಲಿ 69 ಕೇಸ್ ದಾಖಲಾಗಿದ್ದು ಈ ಪ್ರಕರಣದಲ್ಲಿ 37,800 ದಂಡ ವಿಧಿಸಲಾಗಿದೆ. ಹಾಗೆಯೇ
- ಫುಟ್ಪಾತ್ ಪಾರ್ಕಿಂಗ್ ಕೇಸ್ ನಲ್ಲಿ ಆರು ಕೇಸ್ ಗಳು ದಾಖಲಾಗಿದ್ದು ಈ ಪ್ರಕರಣದಲ್ಲಿ 5,000 ದಂಡ ವಿಧಿಸಲಾಗಿದೆ.
- ರೈಡಿಂಗ್ ವೇಳೆಯಲ್ಲಿ ಮೊಬೈಲ್ ಬಳಕೆಗೆ 7 ಕೇಸ್ ಗಳು ದಾಖಲಾಗಿದ್ದು ಈ ಪ್ರಕರಣದಲ್ಲಿ 10000 ದಂಡ ಹಾಕಲಾಗಿದೆ.
- ತ್ರಿಬ್ಬಲ್ ರೈಡಿಂಗ್ 10 ಕೇಸುಗಳು ದಾಖಲಾಗಿದ್ದು ಇದರಲ್ಲಿ 6,000 ದಂಡ ವಿಧಿಸಲಾಗಿದೆ.
- ಇತರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 851 ಕೇಸುಗಳು ದಾಖಲಾಗಿದ್ದು ಇದರಲ್ಲಿ 4,33,600 ದಂಡ ವಿಧಿಸಲಾಗಿದೆ.
ಈ ರೀತಿಯಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರು ನಿನ್ನೆ ವಾಹನ ಸಂಚಾರದ ವೇಳೆಯಲ್ಲಿ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸಿ ಸಂಚಾರಿ ನಿಯಮವನ್ನು ಪಾಲಿಸುವಂತೆ ಅರಿವು ಮೂಡಿಸಿದರು.