ಚಾಮರಾಜನಗರ : ಕರ್ನಾಟಕ ರಾಜ್ಯ ಸರ್ಕಾರವು 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಇದರ ಬೆನ್ನಲ್ಲೇ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕವಿತಾ ಬಿ.ಟಿ. ಇವರನ್ನು ಚಾಮರಾಜನಗರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.
ಚಾಮರಾಜನಗರಕ್ಕೆ ನೂತನ ಎಸ್ಪಿ ನೇಮಕಗೊಂಡಿರುವ ಕವಿತಾ ಇವರಿಗೆ ಶ್ರೀ ಮಾದರ ಸ್ವಾಮಿ, ಎಚ್ ಆಂಜನೇಯ, ಮತ್ತು ಜಿಎಸ್ ಎಸ್ ಚೆನ್ನಯ್ಯ ಹಾಗೂ ಬಿ.ಟಿ ಮಂಜುನಾಥ್ ಆದಿ ಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ಬಿ.ಟಿ.ಅವರಿಗೆ ಉತ್ತಮ ಆಡಳಿತ ನಿರ್ವಹಣೆ ಕಾನೂನು ಸುವ್ಯವಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಬಿ.ಟಿ. ಕವಿತಾ ಅವರು ಚಿತ್ರದುರ್ಗ ತಾಲೂಕು ಬೊಮ್ಮೇನಹಳ್ಳಿ ಗ್ರಾಮದ ನಿವಾಸಿಯಾದ ಚಿತ್ರದುರ್ಗ ನಗರಕ್ಕೆ ಹೆಮ್ಮೆಯ ಅಧಿಕಾರಿಯಾಗಿ ತಮ್ಮ ಆಡಳಿತದ ಅವಧಿಯನ್ನು ಸಲ್ಲಿಸಿ ಐತಿಹಾಸಿಕ ಚಿತ್ರದುರ್ಗಕ್ಕೆ ಹೆಸರು ತಂದು ಕೊಡಲಿ ಹಾಗೂ ಅವರ ಪ್ರತಿಷ್ಠೆಯ ಘನತೆಯ ಗೌರವವನ್ನು ಹೆಚ್ಚಿಸಿ ಎಂದು ಚಿತ್ರದುರ್ಗ ತಾಲೂಕು ತಮಟಕಲ್ಲು ಗ್ರಾಮದ ನಿವಾಸಿಯಾದ ಮಲ್ಲಮ್ಮನ ಮಗ ರಾಮಚಂದ್ರಪ್ಪ ಹರೈಸಿದರು.