ನವದೆಹಲಿ : ಟಿ ಟ್ವೆಂಟಿ ವಿಶ್ವ ಕಪ್ ಗೆದ್ದ ಭಾರತ ತಂಡ ಬಾರ್ಡರ್ಸ್ ನಿಂದ ದೆಹಲಿಗೆ ಇಂದು ಬೆಳಗ್ಗೆ ಆಗಮಿಸಿತು ಐಟಿಸಿ ಮೌರ್ಯ ಹೋಟೆಲ್ನಲ್ಲಿ ವಿಶ್ರಾಂತಿ ಪಡೆದ ಬಳಿಕ ಬೆಳಗ್ಗೆ ಪ್ರಧಾನಿ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತು. ನಿವಾಸಕ್ಕೆ ಆಗಮಿಸಿದ ತಂಡದ ಸದಸ್ಯರನ್ನು ಮೋದಿ ಅಭಿನಂದಿಸಿದರು ಈ ವೇಳೆ ಮೋದಿ ಟೀಮ್ ಇಂಡಿಯ ನಾಯಕರ ಜೊತೆ ಮಾತುಕತೆ ನಡೆಸಿದರು.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡೆ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಆಟಗಾರರ ಬಳಿ ಮಾತುಕತೆ ನಡೆಸಿ ಈ ವೇಳೆ ಮೋದಿ ಅವರು ಕಪ್ ಹಿಡಿದು ಕೊಳ್ಳದೆ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಕೈ ಹಿಡಿದು ನಿಂತು ಕೊಂಡಿದ್ದು ವಿಶೇಷವಾಗಿತ್ತು.
ಜೂನ್ 29 ರಂದು ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ನುಗಳ ಮೂಲಕ ರೋಚಕ ಜಯ ಸಾಧಿಸಿತು. ಈ ಮೂಲಕ ಭಾರತ 17 ವರ್ಷಗಳ ನಂತರ ಟಿ.20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಈ ಗೆಲುವು ಭಾರತದಲ್ಲಿ ಐತಿಹಾಸಿಕ ಸ್ಥಾನ ಉಳಿಸಿಕೊಂಡಿದೆ ಇದು ಮುಂದಿನ ಆಟಗಾರರಿಗೆ ದೇಶಕ್ಕಾಗಿ ಆಡುವುದರ ಮೂಲಕ ಭಾರತದ ಹೆಸರು ಅಜಾರಾಮರ ಗೊಳಿಸಲು ಸಿದ್ಧರಾಗುವಂತೆ ಮೂಲಕ ಮೋದಿ ಕರೆ ಕೊಟ್ಟರು .