ದಾವಣಗೆರೆ : ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 48 ರ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ಅಂದರೆ ದಾವಣಗೆರೆಯ ಜಿಲ್ಲೆಯ ವಾಹನಗಳಿಗೆ 220 ಶುಲ್ಕವಿದೆ ಆದರೆ ಕೆಲ ದಿನಗಳಿಂದ ಕೆ.ಎ.17 ಇರುವಂತಹ ವಾಹನಗಳಿಗೂ ಬೇರೆ ರಾಜ್ಯದ ವಾಹನಗಳಿಗೂ 440 ರೂಪಾಯಿ ಕಟ್ ಮಾಡುತ್ತಿದ್ದಾರೆ.
ಬೇಗ ಟೋಲ್ ಬಿಟ್ಟು ಪಾಸಾದರೆ ಸಾಕು ಎನ್ನುವವರೇ ಜಾಸ್ತಿ ಹೀಗಾಗಿ ಹಣ ಕಟ್ಟಾಗುವುದು ಜನರ ಗಮನಕ್ಕೆ ಬರುತ್ತಿಲ್ಲ. ಫಾಸ್ಟ್ ಟ್ಯಾಗ್ ಚಾರ್ಜು ಮಾಡಿಕೊಂಡವರು ದುಡ್ಡು ಸರಾಗವಾಗಿ ಕಟ್ ಆಗುತ್ತಿದೆ ದಿನಕ್ಕೆ 10 ರಿಂದ 15 ಲಕ್ಷ ಇದೆ ನಲ್ಲಿ ಗೋಲ್ ಮಾಲ್ ಮಾಡಲಾಗುತ್ತಿದೆ ಎಂದು ಆರೋಪ ಬರುತ್ತಿದೆ.
ಇತ್ತೀಚಿಗೆ ಹೊಸ ಕಂಪನಿಯಿಂದ ಟೋಲ್ ಗುತ್ತಿಗೆ ಪಡೆಯುವುದು ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳೀಯ ವಾಹನಗಳ ದಾಖಲೆ ತಂದು ಟೋಲ್ ಗೇಟ್ ಗೆ ಒಪ್ಪಿಸಲು ಹೇಳಲಾಗುತ್ತಿದೆ. ಒಮ್ಮೆ ಸ್ಥಳೀಯರು ದಾಖಲೆ ಕೊಟ್ಟರೇ ಆಯಿತು. ಪದೇ ಪದೇ ತರಲು ಹೇಳುತ್ತಿರುವುದ ಹಣ ಸುಲಿಗೆ ಮಾಡುವ ಪ್ಲಾನ್ ಆಗಿದೆ.
ಇದ್ದಕ್ಕಿದ್ದಂತೆ ಹಣ ಹೆಚ್ಚು ಕಟ್ಟಾಗುತ್ತಿದೆ ಸ್ಥಳೀಯ ವಾಹನದಾರರು ದಾಖಲೆ ಸಲ್ಲಿಸಲು ಟೋಲ್ ಸಿಬ್ಬಂದಿ ಮತ್ತೆ ಮತ್ತೆ ಸೂಚನೆ ನೀಡುತ್ತಲೇ ಇದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯರು ದೂರು ಸಲ್ಲಿಸಿದರು ಇನ್ನು ಹೆಚ್ಚೆತ್ತುಕೊಳ್ಳದ ಟೋಲ್ ಸಿಬ್ಬಂದಿ ಸ್ಥಳೀಯ ವಾಹನಗಳನ್ನು ತಂದು ಎಂಟ್ರಿ ಮಾಡಿಸುವಂತೆ ಸೂಚನೆ ನೀಡಿದೆ.
ದೇಶಾದ್ಯಂತ ಈ ಹೆದ್ದಾರಿ ಟೋಲ್ ಗೇಟ್ ಗಳು ಸುಲಿಗೆ ಕೇಂದ್ರಗಳಾಗಿವೆ ವಾಹನ ಮಾಲೀಕರು ಸಾವಿರಾರು ರೂಪಾಯಿ ಟೋಲ್ ಗೇಟ್ ನಲ್ಲಿ ಕಟ್ಟಬೇಕು ಜೊತೆಗೆ ಸೂಕ್ತವಾದ ಶೌಚಾಲಯವಿಲ್ಲ , ವಿಶ್ರಾಂತಿ ಗೃಹ, ವೈದ್ಯಕೀಯ ಸೇವೆ ವ್ಯವಸ್ಥೆಯೇ ಇಲ್ಲ . ಟೋಲ್ ನಲ್ಲಿ ವಾಹನ ಪಾಸ್ ಆಗುವ ಸ್ಕ್ಯಾನ್ ಆಗುವುದು ಸ್ವಲ್ಪ ತಡೆಯಾದರೆ ಇಲ್ಲಿನ ಸಿಬ್ಬಂದಿ ಆಕಾಶ ಭೂಮಿ ಒಂದೇ ಮಾಡುತ್ತಾರೆ ಇಂತಹ ಸುಲಿಗೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ