ಚಳ್ಳಕೆರೆ : ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ನೂತನವಾಗಿ ಪಡಿತರ ಚೀಟಿ ಹಾಗೂ ಹೆಸರು ಸೇರ್ಪಡೆಗಾಗಿ ಎರಡು ದಿನಗಳ ಕಾಲ ಅವಕಾಶ ನೀಡಿದ್ದು ಎಲ್ಲಾ ಕೇಂದ್ರಗಳ ಮುಂದೆ ಜನರು ಸಾಲಾಗಿ ನಿಂತು ರೇಷನ್ ಕಾರ್ಡಿನಲ್ಲಿ ಹೆಸರು ಸೇರ್ಪಡೆಗಾಗಿ ಮತ್ತು ಹೊಸ ಕಾರ್ಡ್ ಪಡೆಯಲು ನೋಂದಣಿ ಮಾಡಿಕೊಳ್ಳಲು ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಎಲ್ಲಾ ಕಂಪ್ಯೂಟರ್ ಅಂಗಡಿಗಳು ಮುಂದೆ ಜನರು ಸರ್ವರ್ ಸಮಸ್ಯೆಯಿಂದ ಇಡೀ ದಿನ ಮಕ್ಕಳೊಂದಿಗೆ ಕಾದು ಮಹಿಳೆಯರು ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ನಿಜವಾಗಿಯೂ ಜನರ ಪರವಾಗಿ ಇದೆಯೇ ಎಂದು ಜನರು ಪ್ರಶ್ನೆ ಮಾಡಿದರು ಕೇವಲ ಎರಡು ದಿನದ ಮಟ್ಟಿಗೆ ಅವಕಾಶ ನೀಡಿ ಸರ್ವರ್ ಸಮಸ್ಯೆಯಿಂದ ಮನೆ ಕೆಲಸ ಬಿಟ್ಟು ಕರ್ನಾಟಕವನ್ ಗ್ರಾಮವನ್ನು ಮುಂದೆ ಕಾದು ಕುಳಿತಿದ್ದೇವೆ ಯಾವುದೇ ರೀತಿಯಾದ ಅರ್ಜಿ ಸ್ವೀಕರಿಸಿದೆ ತುಂಬಾ ಸಮಸ್ಯೆ ಉಂಟಾಗುತ್ತದೆ ಎಂದು ಆರೋಪಿಸಿದ್ದರು.
ಆದರೆ ನಮ್ಮ ಸರ್ಕಾರದ ದಿಡೀರ್ ಏನ್ ನಿರ್ಧಾರಕ್ಕೆ ಸಾರ್ವಜನಿಕರ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಲ್ಲಾ ಕೇಂದ್ರಗಳ ಮುಂದೆ ಸರ್ವ ಸಮಸ್ಯೆಯಾಗಿದ್ದು ಯಾವುದೇ ಅಧಿಕಾರಿಗಳು ಈ ಕೇಂದ್ರಗಳಿಗೆ ಭೇಟಿ ನೀಡದೆ ಜನರ ಸಮಸ್ಯೆಯನ್ನು ಬಗೆಹರಿಸದೆ ಕಣ್ಣ ಮುಂಚಿ ಕುಳಿತಿದ್ದಾರೆ ಈ ರೇಷನ್ ಕಾರ್ಡಿನಲ್ಲಿ ಸರ್ವರ್ ಸಮಸ್ಯೆಯನ್ನು ಬೇಗ ಬಗೆಹರಿಸಲಿ ಎಂದು ದೂರು ಸಲ್ಲಿಸಿದರು.
ರಾಜ್ಯದಲ್ಲಿ ಪಡಿತರ ಚೀಟಿ ಹೊಸ ಅರ್ಜಿ ಮತ್ತು ತಿದ್ದುಪಡಿಗೆ ಸರ್ಕಾರ ಈಗಾಗಲೇ ಕಲಾವಕಾಶ ನೀಡಿದ್ದು ಇದರ ಸದುಪಯೋಗ ಪಡೆದುಕೊಳ್ಳಲೆಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು ಆದರೆ ಈ ಉಪಯೋಗವನ್ನು ಪಡೆದುಕೊಳ್ಳಲು ಸಾರ್ವಜನಿಕರಿಂದ ಸಾಧ್ಯ ಆಗದೆ ಇರುವುದು ತುಂಬಾ ಸೂಚನೆಯವಾಗಿದೆ ಆಹಾರ ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆಯಿಂದ ಯಾವುದೇ ಅರ್ಜಿ ಸ್ವೀಕರಿಸದೆ ತುಂಬಾ ಸಮಸ್ಯೆಯಾಗಿದೆ ಇದನ್ನು ಬೇಗ ಸರಿ ಮಾಡಿ ಅರ್ಜಿ ಸ್ವೀಕಾರ ಮಾಡುವುದಕ್ಕೆ ಮುಂದಾಗ ಬೇಕೆಂದು ಸಾರ್ವಜನಿಕರು ಒತ್ತಾಯಪಡಿಸಿದರು.