Breaking
Wed. Dec 25th, 2024

ಕರ್ನಾಟಕ ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ ಸವಾರರಿಗೆ ವಿಶೇಷ ಕಾನೂನುಗಳು ಜಾರಿಗೆ…!

ಚಿತ್ರದುರ್ಗ : ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಸುಗಳಲ್ಲಿ ವಿಶೇಷ ಚೇತನೆಲ್ಲರಿಗೆ  ಅನುಕೂಲವಾಗುವಂತೆ ಹತ್ತುವುದು ಮತ್ತು ಇಳಿಯುವ ವಿಶೇಷ ವ್ಯವಸ್ಥೆ ಹಾಗೂ ಅಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೈಕ್ ಮತ್ತು ಸ್ಪೀಕರ್ ಒಂದು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಂಡ್ ಬಸ್ ನಿಲ್ದಾಣಗಳಲ್ಲಿ ಅಳವಡಿಸಬೇಕೆಗಿದೆ.

ಇದೇ ಮಾದರಿಯಲ್ಲಿ ಸಾರ್ವಜನಿಕ ಸೇವೆಯ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸರಕು ಸಾಗಾಣಿಕೆ ವಾಹನಗಳಲ್ಲಿ ಎಮರ್ಜೆನ್ಸಿ ಬಟನ್ ಅನ್ನು ಅಳವಡಿಸುವುದು ಕಡ್ಡಾಯಗೊಳಿಸಿ ಎಂದು ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಈ ಆದೇಶವು 2024 ಸೆಪ್ಟಂಬರ್ 10 ವರೆಗೆ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು.  ಇದರೊಂದಿಗೆ ಆಂಬುಲೆನ್ಸ್ ಗಳಲ್ಲಿ ಜಿಪಿಎಸ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಈ ಯೋಜನೆಯ ಮಕ್ಕಳ ಹಿತದೃಷ್ಟಿಯಿಂದ ಬೈಕ್ ಸವಾರರ ವೇಳೆ ಒಂಬತ್ತು ತಿಂಗಳ ಮೇಲ್ಪಟ್ಟ ಹಾಗೂ ನಾಲ್ಕ ವರ್ಷದ ಒಳಗಿನ ಮಕ್ಕಳಿಗೆ ಶಿಶು ಕವಚ ಕಡ್ಡಾಯ ಇಲ್ಲದಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುವುದು. 2019 ಎಪ್ರಿಲ್ 1 ರ ಹಿಂದೆ ನೋಂದಣಿ ಆಗಿರುವ ಎಲ್ಲಾ ವಾಹನಗಳಿಗೆ ಎಚ್.ಎಸ್.ಆರ್.ಪಿ ನೋಂದಣಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ನಿಗದಿಪಡಿಸಿದೆ ಈ ಕಾಲಾವಕಾಶವನ್ನು 2024 ಸೆಪ್ಟಂಬರ್ 15 ರವರೆಗೆ ವಿಸ್ತರಿಸಲಾಗಿದೆ ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *