ದೇಶಾದ್ಯಂತ ಈಗಾಗಲೇ ಸಿ.ಎನ್.ಜಿ ವಾಹನಗಳು ಸಂಚಾರ ಮಾಡುತ್ತಿವೆ ಇದು ಪ್ರಕೃತಿ ಹಾನಿಯನ್ನುಂಟು ಮಾಡದೆ ಪರಿಸರ ಸ್ನೇಹ ಇಂಧನವಾಗಿ ಮಾರುಕಟ್ಟೆಗೆ ಲಭ್ಯವಾಗಿದೆ ಅತಿ ಹೆಚ್ಚು ಬೇಡಿಕೆ ಉಳ್ಳ ಇಂಧನವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಇವುಗಳಿಂದ ಹೆಚ್ಚು ಪರಿಸರಮಾಲಿನ್ಯ ಉಂಟಾಗುತ್ತಿತ್ತು ಇವುಗಳನ್ನು ತಡೆಯುವುದಕ್ಕೆ ಆಗುತ್ತಿರಲಿಲ್ಲ ಆದ್ದರಿಂದ ಮಾರುಕಟ್ಟೆಯಲ್ಲಿ ಹೊಸ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಸಿ.ಎನ್.ಜಿ ಇಂಧನವನ್ನು ಬಳಸುವ ಹಾಗೆ ಮಾಡಿದ್ದಾರೆ.
ಇದೀಗ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಬಜಾಜ್ ಆಟೋ ವಿಶ್ವದಲ್ಲೇ ಮೊದಲು ಸಿಎನ್ಜಿ ಇಂಧನವನ್ನು ಹೊಂದಿರುವ ಬೈಕ್ ಫ್ರೀಡಂ 125 ಬಿಡುಗಡೆ ಗೊಳಿಸಿದೆ ಇದರ ಎಕ್ಸ್ ಶೋರೂಮ್ ಬೆಲೆ ರೂ.95,000 ದಿಂದ ರೂ.1, 10 ಲಕ್ಷವರೆಗೆ ಇದೆ. ಬಜಾಜ್ ಫ್ರೀಡಂ ಬೈಕ್ 125 ಇಂಜಿನ್ ಹೊಂದಿದ್ದು 9.5 ಟಿಎಸ್ ಪವರ್ ಮತ್ತು 9.7 ಎನ್ ಎಂ ಟ್ರಕ್ ಉತ್ಪಾದಿಸುತ್ತದೆ. ಎರಡು ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್ ನ ಕೆಳಗೆ 2 ಕೆ.ಜಿ ಸಿ.ಎನ್.ಜಿ ಸಿಲಿಂಡರ್ ಅನ್ನು ಈ ಬೈಕ್ ಹೊಂದಿದೆ.
ಇದು ಸಿಎಂಜಿಯಲ್ಲಿ ಚಲಿಸುವಾಗ ಪ್ರತಿ ಕಿಲೋ ಗ್ರಾಂಗೆ 102 ಕಿಲೋಮೀಟರ್ ಮೈಲೇಜ್ ಮತ್ತು ಪೆಟ್ರೋಲ್ ನಲ್ಲಿ ಚಲಿಸುವಾಗ 67 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ ಒಂದು ಸ್ವಿಚ್ ಪ್ರೆಸ್ ಮಾಡುವ ಮೂಲಕ ಸಿಎಂಜೆಯಿಂದ ಪೆಟ್ರೋಲ್ ಮತ್ತು ಪೆಟ್ರೋಲ್ ನಿಂದ ಸಿ.ಎನ್.ಜಿಗೆ ಬದಲಾವಣೆಯಾಗುತ್ತದೆ.
ಫ್ರೀಡಂ ಬೈಕ್ 147 ಕೆಜಿ ತೂಕವಿದ್ದು 758 ಮಿಲಿ ಮೀಟರ್ ಉದ್ದದ ಸಿಂಗಲ್ ಪೀಸ್ ಕಟ್ ಪೀಸ್ ಒಂದಿದೆ ನೋಡೋಕೆ ತುಂಬಾ ಸ್ಟೈಲಿಶ್ ಆಗಿ ಇರುವ ಫ್ರೀಡಂ ಬೈಕ್ ಸ್ಪೂರ್ಟಿ, ಸ್ಟೈಲಿಂಗ್, ಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಜೊತೆಗೆ ಬ್ಲೂಟೂತ್ ಕನೆಕ್ಟಿವ್, ಫಾಸ್ಟ್ ಇನ್ ಕ್ಲಾಸ್, ಲಿಂಕಡ್ ಮನೋಶಾಕ್ ಸ್ಪೆಷಲ್ ಎಲ್ಲಿ ಇಡಿ ಹೆಡ್ ಲ್ಯಾಂಪ್ ಡ್ಯೂಯಲ್ ಕಲರ್ ಸ್ಕೀಮ್ ಅನ್ನೋ ಹೊಂದಿದೆ.
ಈ ಬೈಕ್ ಡಿಸ್ಕ್ ಎಲ್ಇಡಿ ಡ್ರಮ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ ಹೊಸ ಬಜಾಜ್ ಫ್ರೀಡಂ 125 ಸಿ ಏನ್ ಜಿ ಬೈಗಳ ಬುಕಿಂಗ್ ಆರಂಭವಾಗಿದ್ದು ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆರಂಭವಾಗಲಿದೆ. ಬಜಾಜ್ ಫ್ರೀಡಂ 125 ಮೋಟಾರ್ ಸೈಕಲ್ 11 ಸುರಕ್ಷಾ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಬಜಾಜ್ ಕಂಪನಿಯು ಫ್ರೀಡಂ 125 ಬೈಕನ್ನು ಈಜಿಪ್ಟ್, ತಾಂಜಾನಿಯ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ಗಳಂತಹ ದೇಶಗಳಲ್ಲಿ ಆಯೋಜಿಸಿದೆ ಎಂದು ತಿಳಿಸಿದರು.