ತುಮಕೂರು : ಜಮೀನು ವಿವಾದ ಸೇರಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೊಂಡೆ ಮಾರ್ಗೋನಹಳ್ಳಿಯಲ್ಲಿ ಘಟನೆ ನಡೆದಿದೆ. ಶಶಿಕುಮಾರ, ಲಕ್ಷ್ಮಣಯ್ಯ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ನಾಗನ ಪಾಳ್ಯದ ಮಂಜುನಾಥ್ ಎಂಬಾತನ ತಾಯಿ, ಪತ್ನಿೇಗೌಡ ಹಾಗೂ ಗಂಗಮ್ಮ, ನಾಗಯ್ಯ ಎಂಬವರು ಹಲ್ಲೆಗೊಳಗಾಗಿದ್ದಾರೆ. ಲಕ್ಷಣಯ್ಯಗೆ ಸೇರಿದ ಸರ್ವೆ ನಂ.26ರ ಜಮೀನಿನ ವಿಚಾರಕ್ಕೆ ಗಲಾಟೆ ನಡೆದಿದೆ. 1 ಗಂಟೆಗೆ 10 ಗುಂಟೆಗೆ ಪಹಣಿ ಇದ್ದು, ಸರ್ವೆ ನಂ.26 ರಲ್ಲಿ ಇರುವ 15 ಗುಂಟೆ ಕರಾಬಿನ ವಿಚಾರಕ್ಕೆ ಮಾರಾಮಾರಿ ನಡೆದಿದೆ. 15 ಗುಂಟೆ ಕರಾಬು ಜಾಗದಲ್ಲಿ ಲಕ್ಷಣಯ್ಯ ಉಳುಮೆ ಮಾಡಿಕೊಂಡಿದ್ದಾರೆ. 15 ಗುಂಟೆ ಕರಾಬು ನಮಗೆ ಸೇರ ಪಕ್ಕದ ಜಮೀನಿನ ಮಂಜುನಾಥ ಕುಟುಂಬಸ್ಥರಿಂದ ಲಕ್ಷ್ಮಣಯ್ಯನ ಮೇಲೆ ಹಲ್ಲೆ ಮಾಡಿದ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಗಳಕ್ಕೆ ಬಂದ ಮಂಜುನಾಥ್ ಕುಟುಂಬಸ್ಥರು, ಲಕ್ಷ್ಮಣಯ್ಯನನ್ನು ಹಿಡಿದು ನೀರಿನಲ್ಲಿ ಮುಳುಗಿಸಿ. ಕುಡುಗೋಲು ಹಾಗೂ ಕಲ್ಲಿನಿಂದ ಹಲ್ಲೆ. ಹಲ್ಲೆಯಿಂದ ಲಕ್ಷ್ಮಣಯ್ಯಗೆ ಗಂಭೀರ ತೊಂದರೆಯಾಗಿದ್ದು, ತುರುವೇಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.