ಚಿತ್ರದುರ್ಗ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಆದರೆ ರೇಣುಕಾ ಸ್ವಾಮಿ ಮನೆಗೆ ರಾಜಕಾರಣಿಗಳು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸೇರಿದಂತೆ ಹಲವರು ಬೇಟೆ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ ಇಂದು ಮಾಜಿ ಸಚಿವ ಬಿಸಿ ಪಾಟೀಲ್ ಅವರು ಭೇಟಿ ನೀಡಿ ರೇಣುಕಾ ಸ್ವಾಮಿ ಕುಟುಂಬಕ್ಕೆ ಶಾಂತನ ಹೇಳಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.
ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷವಾಗಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರದಲ್ಲಿ ಜೈಲ್ ವಾಸ ಅನುಭವಿಸುತ್ತಿದ್ದಾರೆ. ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ಹಾಗೂ ರೇಣುಕಾ ಸ್ವಾಮಿ ಪತ್ನಿಗೆ ಉದ್ಯೋಗ ಕೊಡಬೇಕು ಈ ಪ್ರಕರಣದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ತಪ್ಪಿತಸ್ಥರಿಗೆ ಕಾನೂನಿ ಮೂಲಕ ಶಿಕ್ಷೆ ಆಗುತ್ತದೆ ಮಾಡ್ರನ್ ಜಗತ್ತಿನಲ್ಲಿ ಹೆಚ್ಚು ಟೆಕ್ನಾಲಜಿ ಬೆಳೆದಿರುವುದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೃತ ರೇಣುಕಾ ಸ್ವಾಮಿ ಮೇಲೆ ಸಣ್ಣ ದೂರು ಕೊಟ್ಟು ವಿಚಾರಣೆ ನಡೆಸಬಹುದಾಗಿತ್ತು ಆದರೆ ಇದಕ್ಕೆ ಸಾಯಿಸುವ ಅಂತಕ್ಕೆ ಹೋಗಬಾರದಿತ್ತು, ಇಂತಹವರಿಗೆ ಮರಣ ದಂಡನೆ ಅಲ್ಲ ಇನ್ನು ಉಗ್ರವಾದ ಶಿಕ್ಷೆಯನ್ನೇ ಕೊಡಬೇಕು ನಟ ದರ್ಶನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾರೆ ಮುಗಿದು ಹೋಗುತ್ತಿತ್ತು. ಅದರ ಬಗ್ಗೆ ತನಿಖೆ ಮಾಡಲಿ ಪೊಲೀಸರು ಇದ್ದಾರೆ ನಾವು ಯಾವುದು ಸುಳ್ಳು ಯಾವುದು ನಿಜ ಅಂತ ಹೇಳುವುದಕ್ಕೆ ಆಗಲ್ಲ ದರ್ಶನ್ ಒಳ್ಳೆ ವ್ಯಕ್ತಿ, ಒಳ್ಳೆ ನಟ ಆಗಿದ್ದ ಈಗ ಅವರ ಮೇಲೆ ಕೊಲೆ ಆರೋಪ ಬಂದಿದೆ ಕೋರ್ಟಿನಲ್ಲಿ ಕೇಸ್ ಹೆದರಿಸುತ್ತಿದ್ದಾರೆ ತನಿಖೆ ಆದ್ಮೇಲೆ ಗೊತ್ತಾಗುತ್ತೆ ಎಂದರು.
ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಉಳಿದ ದಿನಗಳು ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ. ದರ್ಶನ್ ಅವರ ಪತ್ನಿ ಇವರನ್ನು ಜಾಮೀನಿನ ಮೂಲಕ ಹೊರಗೆ ಕರೆ ಕರೆದು ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು ದರ್ಶನ್ ಬಿಡುಗಡೆಯ ಬಗ್ಗೆ ದೇವರ ಹತ್ತಿರ ಪ್ರಶ್ನೆ ಕೇಳಿದ್ದಾರೆ ಇನ್ನು ಮುಂತಾದ ಪ್ರಯತ್ನದಲ್ಲಿ ದರ್ಶನ್ ಅವರನ್ನು ಜೈಲಿನಿಂದ ಹೊರಗೆ ತರಬೇಕೆಂಬ ಒತ್ತಾಯವು ಪರೋಕ್ಷವಾಗಿ ಕೇಳಿ ಬರುತ್ತದೆ.