ದಾವಣಗೆರೆ : ಕೊಂಡಜ್ಜಿ ರಸ್ತೆಯ ನಿವಾಸಿ ಅರ್ಜುನ್ ಎಂಬುವರ ಪತ್ನಿ ಅಮೃತ ಅವರು ಹೆರಿಗೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು ನಾರ್ಮಲ್ ಡೆಲಿವರಿ ಆಗಿದೆ ಹಿನ್ನಲೆ ಸಿಜರೆನ್ ಮಾಡಿ ಮಗು ತೆಗೆಯುವ ಸಂದರ್ಭದಲ್ಲಿ ಮಗುವಿನ ಮರ್ಮಾಂಗಕ್ಕೆ ತೊಂದರೆ
ಮಾಡಿದ್ದಾರೆ. ದಾವಣಗೆರೆ ಜಿಲ್ಲಾ ಆಸ್ಪತ್ರೆ ವೈದ್ಯ ಕಾರಣ ಎಂದು ಆರೋಪಿಸಿ ಸದ್ಯ ಆಸ್ಪತ್ರೆ ಎದಿರು ಮಗುವಿನ ಸಂಬಂಧಿಕರಿಂದ ಪ್ರತಿಭಟನೆ ನಡೆಸಲಾಯಿತು.
ಜೂನ್ 27ರಂದು ಅಮೃತಾಗೆ ಸಿಸರಿನ್ ಮಾಡಿ ಹೆರಿಗೆ ಮಾಡಲಾಗಿದೆ. ಈ ವೇಳೆ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗ ಕೊಯ್ದಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಮಗುವಿನ ಸ್ಥಿತಿ ಚಿಂತಾ ಜನಕವಾಗಿರುವುದರಿಂದ ಮಗುವನ್ನು ಬಾಪೂಜಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸತತ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಗು ಮೃತಪಟ್ಟಿದೆ.
ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಮಗುವಿನ ಸಾವಿಗೆ ಕಾರಣವಾದ ವೈದ್ಯನನ್ನು ಅಮಾನತ್ತು ಮಾಡಿಸುವಂತೆ ಪೋಷಕರು ಒತ್ತಾಯಿಸಿದರು.