ಬೆಂಗಳೂರು : ಕೇಂದ್ರ ಸಚಿವಾಲಯಗಳಲ್ಲಿ ಖಾಲಿ ಇರುವ ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಮತ್ತು ಸಿಬಿಐಸಿ ಸಿಬಿಎನ್ ನಲ್ಲಿ ಖಾಲಿ ಇರುವ ಹವಾಲ್ದಾರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸಚಿವಾಲಯಗಳಲ್ಲಿ ಒಟ್ಟು 8326 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಂ ಎಸ್ ಟಿ 4887 ಹುದ್ದೆಗಳು ಸಿಬಿಐಸಿ ಮತ್ತು ಸಿಬಿಎನ್ ನಲ್ಲಿ ಒಟ್ಟು 3439 ಹವಾಲ್ದಾರ್ ಸಿ ಗ್ರೂಪ್ ಹುದ್ದೆಗಳಾಗಿವೆ.
ಕರ್ನಾಟಕ ಕೇರಳ ಸರ್ಕಲ್ ನ ಒಟ್ಟು 399 ಹುದ್ದೆಗಳು ಸೇರುವೆ ಕೇಂದ್ರ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಹಾಗೂ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ ವಿಭಾಗಕ್ಕೆ ಹವಾಲ್ದಾರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 31 ಕಡೆ ದಿನಾಂಕವಾಗಿರುತ್ತದೆ ಅರ್ಜಿಯ ಶುಲ್ಕ ನೂರು ರೂಪಾಯಿ ವಿಧಿಸಲಾಗಿದೆ. ಎಸ್ಸಿ, ಎಸ್ಟಿ , ಮಾಜಿ ಸೈನಿಕರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದೆ. ಹಾಗೂ ಎಸ್ ಎಂ ಟಿ ಹುದ್ದೆಗಳಿಗೆ ವಯೋಮಿತಿಯನ್ನು ಕನಿಷ್ಠ 18ರಿಂದ 25 ವರ್ಷ ಇದ್ದು ಹವಾಲ್ದಾರ್ ಹುದ್ದೆಗಳಿಗೆ 18 ರಿಂದ 27 ವರ್ಷ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ ಎರಡು ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ.
ಆಯ್ಕೆಯ ವಿಧಾನ : ಈ ವಿಭಾಗಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ಅಥವಾ ನವಂಬರ್ ನಲ್ಲಿ ಕಂಪ್ಯೂಟರ್ ಆಧಾರಿತ ಸಿ ಬಿ ಟಿ ಪರೀಕ್ಷೆ ನಡೆಯಲಿದೆ ಎಂದು ಮತ್ತು ಎಸ್ ಎಂ ಟಿ ಹುದ್ದೆಗಳಿಗೆ ಮಾತ್ರ ಸಿ.ಬಿ.ಟಿ ಇರುತ್ತದೆ. ಹವಾಲ್ದಾರ್ ಹುದ್ದೆಗಳಿಗೆ ಸಿ.ಬಿ.ಟಿ.ಯ ಜೊತೆಗೆ ದೈಹಿಕ ಸಹಿಷ್ಣತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ ಮೊದಲು ನಡೆಯುವ ಸಿ ಬಿ ಟಿ ಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ. ಒಂದರ ಪತ್ರಿಕೆಯಲ್ಲಿ ಎರಡು ವಿಭಾಗಗಳಿರುತ್ತವೆ ನ್ಯೂಮೆರಿಕಲ್ ಅಂಡ್ ಮ್ಯಾಥಮೆಟಿಕಲ್ ಎಬಿಲಿಟಿ ರಿಸನಿಂಗ್ ಎಬಿಲಿಟಿ ಅಂಡ್ ಪ್ರಾಬ್ಲೆಮ್ ಸಾಲ್ವಿಂಗ್ ಇದಕ್ಕೆ 120 ಅಂಕಗಳು ಇರುತ್ತವೆ 45 ನಿಮಿಷ ಅವಧಿ ಎರಡು ಭಾಗಗಳಲ್ಲಿ ತಲಾ 20 ಪ್ರಶ್ನೆಗಳಿರುತ್ತವೆ.
ಸೆಷನ್ಸ್ 2ನೇ ಪತ್ರಿಕೆಯ ಎರಡು ವಿಭಾಗಗಳಿಗೆ ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷಾ ಸಾಮರ್ಥ್ಯ ಪರೀಕ್ಷೆ ನಡೆಯದ್ದು ಇವುಗಳಲ್ಲಿ 150 ಅಂಕಗಳು ಇರುತ್ತವೆ. ಇದರಲ್ಲಿ ತಲ ಇಪ್ಪತೈದು ಪ್ರಶ್ನೆಗಳಿಗೆ 45 ನಿಮಿಷ ಅವಧಿ ಇರುತ್ತದೆ. ಮುಂದಿನ ಹಂತಕ್ಕೆ ಪ್ರವೇಶಿಸಬೇಕಾದರೆ ಎರಡರಲ್ಲೂ ಕನಿಷ್ಠ 30ರಷ್ಟು ಅಂಕಗಳನ್ನು ಗಳಿಸಬೇಕು. ಸೆಶನ್ ಒಂದರ ಪತ್ರಿಕೆಗೆ ನಕಾರಾತ್ಮಕ ಅಂಕಗಳಿರುವುದಿಲ್ಲ. ಸೆಶನ್ ಎರಡನೇ ಪತ್ರಿಕೆಗೆ ನಕಾರಾತ್ಮಕ ಅಂಕಗಳು ಇರುತ್ತದೆ ಅಂದರೆ ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ.
ಎಂ ಟಿ ಎಸ್ ಹುದ್ದೆ ಆಯ್ಕೆ ಮಾಡಿಕೊಳ್ಳುವವರಿಗೆ ಸಿ.ಬಿ.ಟಿ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಮೂಲ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ ಹವಲ್ದಾರ್ ಹುದ್ದೆಗಳಿಗೆ ಸಿ ಬಿ ಟಿ ಮೆರಿಟ್ ಹಾಗೂ ದೈಹಿಕ ಪರೀಕ್ಷೆಯ ಫಲಿತಾಂಶವನ್ನು ಅನುಸರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ಇಂಗ್ಲಿಷ್ ಹಿಂದಿ ಜೊತೆಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲ್ಬುರ್ಗಿ, ಮಂಗಳೂರು ,ಮೈಸೂರು, ಉಡುಪಿ ಹಾಗೂ ಶಿವಮೊಗ್ಗ ಪರೀಕ್ಷಾ ಕೇಂದ್ರಗಳಾಗಿವೆ. ಹುದ್ದೆಗಳ ವಿಂಗಡನೆ ಹವಾಲ್ದಾರ್ ಹುದ್ದೆಗಳ ದೈಹಿಕ ಸಹಿಷ್ಣತೆ ಸಾಮರ್ಥ್ಯ ಪರೀಕ್ಷೆಯ ಮಾನದಂಡಗಳು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಗ್ರೂಪ್-ಸಿ ಅಡಿಯಲ್ಲಿ ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಎಂ ಟಿ ಎಸ್ ಹುದ್ದೆಗಳು ಎನ್ನುತ್ತಾರೆ. ಪಿ ಒನ್, ಡ್ರಾಫ್ಟ್, ಚೌಕಿದಾರ, ಸಫಾಯಿವಾಲ, ಇತರೆ ಹುದ್ದೆಗಳು ಇದರ ಅಡಿಯಲ್ಲಿ ಬರುತ್ತವೆ. ಸಿಬಿಐಸಿ ಹಾಗೂ ಸಿಬಿಎನ್ ಕೇಂದ್ರ ಹಣಕಾಸು ಸಚಿವಾಲಯದ ರೆವಿನ್ಯೂ ಡಿಪಾರ್ಟ್ಮೆಂಟ್ ಅಡಿಯಲ್ಲಿ ಬರುವ ಸಂಸ್ಥೆಗಳಾಗಿರುತ್ತವೆ, ಇದರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರೀತಿ ಕೆಲಸ ಮಾಡುವ ಹುದ್ದೆಗಳಿಗೆ ಹವಾಲ್ದಾರ್ ಹುದ್ದೆಗಳು ಎನ್ನುತ್ತಾರೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಹಾಗೂ ಸಂಸ್ಥೆಗಳಲ್ಲಿನ ಗ್ರೂಪ್ಗೆ ಬಿ ಹಂತದ ಮತ್ತು ಇನ್ಸ್ಪೆಕ್ಟರ್ ಹಿರಿಯ ಸಹಾಯಕ ಹಂತದ ಒಟ್ಟು 17727 ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ ಇದು ಜುಲೈ 24 ರಂದು ಅರ್ಜಿ ಸಲ್ಲಿಸಲು ಕಳೆಯ ದಿನಾಂಕವಾಗಿರುತ್ತದೆ ಯಾವುದೇ ಪದವಿ ತೆರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಸಂಯೋಜಿತ ಪದವಿ ಮಟ್ಟದ ಪರೀಕ್ಷೆಯ ಮೂಲಕ ನೇಮಕಾತಿ ಮಾಡಲಾಗುವುದು ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ಅನ್ನು ಸಂಪರ್ಕಿಸಿ https://ssc.gov.in/