ಕೋಲಾರ : ಸರ್ಕಾರವು ಕಳೆದ ಎರಡು ವಾರಗಳ ಹಿಂದೆ ಕೆಎಂಎಫ್ ಹಾಲಿನ ದರ ಹೆಚ್ಚು ಮಾಡಿದ್ದು, ಇದೀಗ ಹಾಲು ಒಕ್ಕೂಟ ಉತ್ಪಾದಕರಿಗೆ ನೀಡುವ ದರದಲ್ಲಿ ಎರಡು ರೂಪಾಯಿ ಕಡಿತ ಮಾಡಿದೆ. ಇದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ ಒಕ್ಕೂಟದ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಕೋಲಾರದಲ್ಲಿ ರೈತರ ಆಕ್ರೋಶ ಬಗೆಲೆದಿದೆ ಈ ಮೊದಲು ಕೋಲಾರ ಹಾಲು, ಉತ್ಪಾದಕರ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.40 ನೀಡುತ್ತಿತ್ತು ಆದರೆ ಇದೀಗ ಏಕಾಏಕಿ ಹಾಲು ಉತ್ಪಾದಕರಿಂದ ಹಾಲಿನ ಖರೀದಿ ದರವನ್ನು ಎರಡು ರೂಪಾಯಿ ಕಡಿತ ಮಾಡಿದ್ದು 33.40 ಇದ್ದ ಹಾಲನ್ನು 31.40ಗೆ ಕುಸಿದಿದೆ.
ಹಾಲು ದರ ಹೇಳಿಕೆ ಮಾಡುವುದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದು ಮನುಷ್ಯರಿಂದ ಹಿಡಿದು ಪಶುಗಳ ಆಹಾರದವರೆಗೆ ಎಲ್ಲಾ ದರಗಳನ್ನು ಏರಿಕೆ ಮಾಡಿದೆ.
ಈಗ ರೈತರಿಗೆ ಕೊಡುವ ದರವನ್ನು ಕಡಿಮೆ ಮಾಡುವ ಮೂಲಕ ರಾಜ್ಯ ಸರ್ಕಾರ ತಮ್ಮ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಸರ್ಕಾರದ ಗ್ಯಾರಂಟಿಗಳ ಮೂಲಕ ನೀಡುವ ಹಣ ಬೇಡ ಉಚಿತ ಪ್ರವಾಸವು ಬೇಡ ನಮ್ಮ ಕಷ್ಟಕ್ಕೆ ಸರಿಯಾದ ಬೆಲೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಶು ಆಹಾರ ಬೆಲೆ ಏರಿಕೆಯಾಗಿದೆ ಸರಿಯಾದ ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರಿಗೆ ಹಸಿರು ಮೆವು ಇಲ್ಲ ಇತ್ತ ಪಶು ಆಹಾರದ ಹಿಂಡಿ, ಬೂಸಾ, ಪಿಡ್ಸ್ ಬೆಲೆ ಕೂಡ ಏರಿಕೆಯಾಗಿದೆ ಇಂತಹ ಪರಿಸ್ಥಿತಿಯಲ್ಲಿ ಈಗ ರೈತರಿಗೆ ಹಾಲು ಖರೀದಿ ದರದಲ್ಲಿ ಎರಡು ರೂಪಾಯಿ ಹೇಳಿಕೆ ಮಾಡಿರುವುದು ರೈತರ ಮೇಲೆ ಸರ್ಕಾರ ಕಲ್ಲು ಎಳೆದಂತಾಗಿದೆ.
ರೈತ ಸಂಘದ ಕಾರ್ಯಕರ್ತರು ಹಸು, ಮೇವು, ಪಶು ಆಹಾರ, ಹಾಲಿನ ಕ್ಯಾನ್ ಹಾಗೂ ಹಸುವಿನ ಸಗಣಿ, ಗಂಜಲ ಸಹಿತ ಪ್ರತಿಭಟನೆ ಮಾಡಿ ಕೂಡಲೇ ಕೋಚಿಮೂಲ್ ತನ್ನ ಹಾಲು ಉತ್ಪಾದಕರಿಗೆ ಕಡಿಮೆ ಮಾಡಿರುವ ಖರೀದಿ ದರವನ್ನು ವಾಪಸ್ ಪಡೆಯುವಂತೆ ರೈತ ಸಂಘದ ಮುಖಂಡ ನಾರಾಯಣಗೌಡ ಒತ್ತಾಯಿಸಿದರು. ಮತ್ತು ಸರ್ಕಾರ ಈ ಕೂಡಲೇ ಹಾಲು ಉತ್ಪಾದಕರಿಗೆ ಕನಿಷ್ಠ 40 ರೂಪಾಯಿ ನೀಡಬೇಕೆಂದು ಆಗ್ರಹಿಸಿದರು.
ಬೇಸಿಗೆಯಲ್ಲಿ ಅಂದರೆ ಮೇ ತಿಂಗಳವರೆಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಪ್ರತಿನಿತ್ಯ 9.65 ಲಕ್ಷ ಲೀಟರ್ ಹಾಲು, ಸಂಗ್ರಹವಾಗುತ್ತಿತ್ತು. ಆದರೆ ಜೂನ್ ತಿಂಗಳಿನಿಂದ ಪ್ರತಿದಿನ ಕೋಚಿಮುಲ್ ನಲ್ಲಿ ಸುಮಾರು 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಇದರಿಂದ ಸರಾಸರಿ ಎರಡುವರೆ ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಸದ್ಯ ಒಕ್ಕೂಟದಲ್ಲಿ 10 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು ಉಳಿದ ಎರಡೂವರೆ ಲಕ್ಷ ಲೀಟರ್ ಹಾಲು, ಮಾರಾಟವಾಗಿದೆ.
ಹಾಲಿನ ಪೌಡರ್ ಸೇರಿದಂತೆ ಬೇರೆ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಹಾಲು ಒಕ್ಕೂಟಕ್ಕೆ ನಷ್ಟವಾಗುತ್ತಿದೆ. ಇದರಿಂದ ಕೋಲಾರ ಹಾಲು ಒಕ್ಕೂಟಕ್ಕೆ ಪ್ರತಿ ತಿಂಗಳು ಆರರಿಂದ ಏಳುಕೋಟಿ ನಷ್ಟವಾಗುತ್ತಿದೆ ಹೀಗಾಗಿ ನಷ್ಟದ ಸುಳಿಯಲ್ಲಿ ಸಿಲುಕಿದ್ದನ್ನು ತಪ್ಪಿಸಿಕೊಳ್ಳಲು ಕೋಲಾರ ಹಾಲು ಒಕ್ಕೂಟ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಮುಂದಾಗಿದೆ ಅನ್ನೋದು ಒಕ್ಕೂಟದ ಅಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳ ಒಮ್ಮತವಾಗಿದೆ.