Breaking
Tue. Dec 24th, 2024

ಅಮರನಾಥ ಗುಹಾಂತರ ಯಾತ್ರಾ ಸ್ಥಳವು ತಾತ್ಕಾಲಿಕವಾಗಿ ಸ್ಥಗಿತ…!

ಶ್ರೀನಗರ : ಜಗತ್ಪ್ರಸಿದ್ಧ ದೇವಾಲಯಗಳಲ್ಲಿ ಅಮರನಾಥ ದೇವಾಲಯವು ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ ಈ ದೇವಾಲಯವು ಗುಹಾಂತರ ದೇವಾಲಯವಾಗಿದ್ದು, ಬಾರಿ ಮಳೆಯಿಂದ ಇಂದು ದೇವಾಲಯದ ಮಾರ್ಗದಲ್ಲಿ ಯಾತ್ರಾ ವ್ಯಕ್ತಿಗಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಮರನಾಥ ದೇವಾಲಯದಲ್ಲಿ ಶುಕ್ರವಾರ ರಾತ್ರಿಯಿಂದ ಬಾಲ್ಟಾಲ್ ಮತ್ತು ಮಹಲ್ಗಾಮ್ ಮಾರ್ಗದಲ್ಲಿ ಭಾರಿ ಮಳೆ ಸುರಿದಿದೆ ಹೀಗಾಗಿ ಯಾತ್ರೆಗಳ ಸುರಕ್ಷತೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು 3800 km ಎತ್ತರದ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ರೋಪಗೊಂಡ ಮಂಜುಗಡ್ಡೆಯ ಲಿಂಗದ ದರ್ಶನವನ್ನು ಪಡೆದಿದ್ದಾರೆ ಸುಮಾರು 4.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಕಳೆದ ವರ್ಷ ಗುಹಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಆಗಸ್ಟ್ 19 ರ ವರೆಗೆ ಯಾತ್ರೆ ಮುಂದುವರೆಯಲಿದೆ ಯಾತ್ರೆಯ ಮೊದಲನೇ ವಾರದಲ್ಲಿ ದಾಖಲೆಯ 1.51 ಲಕ್ಷ ಯಾತರಾರುತಿಗಳು ಭೇಟಿ ನೀಡಿದರು. ಯಾತ್ರೆಗೆ ಈ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕರಗದ ಕಾರಣ ಈಗಷ್ಟೇ ಬಂದಿರುವ ಯಾತ್ರಿಕರು ನಿರಾಶೆಗೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ತಾಪಮಾನದಿಂದ ಶಿವಲಿಂಗ ಕರಗುವ ಪ್ರಕ್ರಿಯೆ ವೇಗಗೊಂಡಿದೆ. 2008ರ ನಂತರ ಯಾತ್ರೆಯ ಮೊದಲು 10 ದಿನಗಳಲ್ಲಿ ಮಂಜುಗಡ್ಡೆಯು ಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಇದೆ ಮೊದಲನೇ ಬಾರಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Related Post

Leave a Reply

Your email address will not be published. Required fields are marked *