ಬೆಂಗಳೂರು : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಸಮಾಜ ಕಲ್ಯಾಣ ಇಲಾಖೆ ನಡೆ ಬಗ್ಗೆ ಶಾಸಕ ನರೇಂದ್ರ ಸ್ವಾಮಿ ಗರಂ ಆಗಿದ್ದು ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶುಕ್ರವಾರ ಎಸಿ,ಎಸ್ಟಿ ಉಪಯೋಗಗಳ ಪರಿಷತ್ ಸಭಾಂಗಣದಲ್ಲಿ ಸಭಾಂಗಣ ಕಲ್ಯಾಣ ಇಲಾಖೆ ಯೋಜನೆಗಳ ಅನುಷ್ಠಾನ ನಿಯಮಾವಳಿಗಳ ವಿಚಾರದಲ್ಲಿ ಜಟಾಪಟಿ ನಡೆದಿದೆ. ಈ ವೇಳೆ ಶಾಸಕ ನರೇಂದ್ರ ಸ್ವಾಮಿ ಅವರ ಸಚಿವ ಹೆಚ್.ಸಿ ಮಹದೇವಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಕೆಲವು ನಡವಳಕೆ ಸರಿಪಡಿಸಿಕೊಳ್ಳುವಂತೆ ನರೇಂದ್ರ ಸ್ವಾಮಿ ಗರಂ ಆದರು ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಶಾಸಕರನ್ನು ಸಮಾಧಾನಪಡಿಸಿ ಬಳಿಕ ಸರಿಪಡಿಸುವ ಭರವಸೆ ನೀಡಿದರು ಆನಂತರ ಸುದ್ಧಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ನರೇಂದ್ರಸ್ವಾಮಿ ಅವರ ಹೆಸರು ಪದೇ ಪದೇ ಪ್ರಸ್ತಾಪಿಸಿದರು.