ಶಿವಮೊಗ್ಗ : ಇತ್ತೀಚಿಗೆ ನಗರದಲ್ಲಿ ಡೆಂಗ್ಯೂ ಮಹಾಮಾರಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಆದರೆ ಶಿವಮೊಗ್ಗ ಗಾಂಧಿನಗರದಲ್ಲಿ 74 ವರ್ಷದ ವೃದ್ಧ ಝಿಕಾ ವೈರಸ್ ನಿಂದ ಮೃತಪಟ್ಟಿದಾರೆ.
ನಗರ ಖಾಸಗಿ ಆಸ್ಪತ್ರೆಗೆ 74 ವರ್ಷದ ವೃದ್ಧರನ್ನು ಜೂನ್ 19 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರೆಂದು ದಾಖಲು ಮಾಡಲಾಗಿತ್ತು ಇವರಿಗೆ ಝಿಕಾ ವೈರಸ್ ಪತ್ತೆಯಾಗಿದ್ದು, ನಂತರ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಕುಟುಂಬಸ್ಥರು ಗುರುವಾರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋದರು ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆಂದು ಈ ಘಟನೆ ಗಾಂಧಿನಗರದಲ್ಲಿ ನಡೆದಿದೆ.