ನವ ದೆಹಲಿ : ನೀಟ್ – ಯುಜಿ ಕೌನ್ಸೆಲಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಇಂದಿನಿಂದ ಪ್ರಾರಂಭವಾಗಬೇಕಾಗಿದ್ದ ಕೌನ್ಸಿಲಿಂಗ್ ಅನ್ನು ಮುಂದಿನ ಸೂಚನೆವರೆಗೆ ಮುಂದುವರಿಕೆಯಾಗಿದೆ. ತೀವ್ರ ಒತ್ತಡದ ಬೆನ್ನಲ್ಲೇ ಕೌನ್ಸಲಿಂಗ್ ಮುಂದೂಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಕೌನ್ಸೆಲಿಂಗ್ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ ನೀಟ್ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜುಲೈ ಯಾರು ರಂದು ಕೌನ್ಸಲಿಂಗ್ ಆರಂಭವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಸದ್ಯ ಜುಲೈ 8ರಂದು ಸುಪ್ರೀಂ ಕೋರ ನಲ್ಲಿ ನಡೆಯಲಿರುವ ವಿಚಾರಣೆಯ ಮೇಲು ಸಂಬಂಧಪಟ್ಟ ಇಲಾಖೆಗಳು ಮತ್ತು ಸಚಿವಾಲಯಗಳು ಕಣ್ಣಿಟ್ಟಿವೆ.
ನೆಟ್ ಯುಜಿ ಕೌನ್ಸಿಲಿಂಗ್ ಅನ್ನೋ ವಿಳಂಬಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದರಿಂದ ಈ ಬೆಳವಣಿಗೆ ನಡೆದಿದೆ ಜುಲೈ 8ರಂದು ನೀಟ್ ಯುಜಿ 2024ಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ ಈ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜೆಬಿ ಪರಿದಿವಾಲ ಮತ್ತು ಮನೋಜ್ ಮಿಶ್ರಾ ಅವರೊಂದಿಗೆ ಸಿಜೆಐ ಡಿ.ವೈ.ಚಂದ್ರಚೂಡಾ ಅವರ ಪೀಠವು ವಿಚಾರಣೆ ನಡೆಸಲಾಗಿದೆ.