Breaking
Thu. Dec 26th, 2024

ಬಿಸಿ ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಆತ್ಮಹತ್ಯೆ…!

ದಾವಣಗೆರೆ : ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆಜಿ 41 ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ ಬಿಸಿ ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವೆನೆ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದರು.

ವಿಷ ಸೇವನೆಯ ವಿಷಯ ತಿಳಿದು ಸ್ಥಳೀಯರು ಪ್ರತಾಪ್ ಕುಮಾರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಬಳಿಕ ಹೆಚ್ಚಿನ ಚಿಕಿತ್ಸೆ ಗೆಂದು ಶಿವಮೊಗ್ಗದ ಮೇಘನಾ ಆಸ್ಪತ್ರೆಗೆ ರವಾನಿಸಲಾಗಿದೆ ಆದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರತಾಪ್ ಕುಮಾರ್ ಮೃತಪಟ್ಟಿದ್ದಾರೆ.

ದಾವಣಗೆರೆ ಕತ್ತಲಗೆರೆ ಗ್ರಾಮದ ಮೃತ ಪ್ರತಾಪ್ ಕುಮಾರ್ 15 ವರ್ಷಗಳ ಹಿಂದೆ ಬಿಸಿ ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯಳನ್ನು ಮದುವೆಯಾಗಿದ್ದರು ಆದರೆ ಇದೀಗ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

KA-68-M-1458 ನಂಬರಿನ ಇನ್ನೋವಾ ಕಾರಿನಲ್ಲಿ ಬಂದಿದ್ದು ಪ್ರತಾಪ್ ಕುಮಾರ್ ಹರಿಹರ ಶಿವಮೊಗ್ಗ ರಾಜ್ಯ ಹೆದ್ದಾರಿಗಳಲ್ಲಿ ಬರುವ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ ಆದರೆ ಪ್ರತಾಪ್ ಕುಮಾರ್ ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

ಪ್ರತಾಪ್ ಕುಮಾರ್ ಬೇರೆ ಯಾರು ಅಲ್ಲ ಬಿಸಿ ಪಾಟೀಲ್ ಅವರ ಪತ್ನಿ ವನಜಾವರ ಸಹೋದರ ಇನ್ನು ತಮಗೆ ಗಂಡು ಮಕ್ಕಳು ಇಲ್ಲದ್ದರಿಂದ ಸಂಬಂಧಿ ಪ್ರತಾಪ್ ಕುಮಾರ್ ರವರಿಗೆ ಬಿಸಿ ಪಾಟೀಲ್ ತಮ್ಮ ಹಿರಿಯ ಪುತ್ರಿ ಸೌಮ್ಯಳನ್ನು ಮದುವೆ ಮಾಡಿ ಕೊಟ್ಟಿದ್ದರು.

ಮದುವೆ ಬಳಿಕ ಪ್ರತಾಪ್ ತಮ್ಮ ಮಾವ ಬಿಸಿ ಪಾಟೀಲ್ ಅವರ ಕೃಷಿಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಇದೀಗ ಅಳಿಯ ದಿಡೀರ್ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಬಿಸಿ ಪಾಟೀಲ್ ಕುಸಿದು ಬಿದ್ದಿದ್ದಾರೆ ಹಿರೇಕೆರೂರಿನಲ್ಲಿದ್ದ ಬಿಸಿ ಪಾಟೀಲ್ ಇದೀಗ ಮೃತ ದೇಹವಿರುವ ಶಿವಮೊಗ್ಗದ ಮೇಗಾನ್ ಆಸ್ಪತ್ರೆಗೆ ಬಂದು ಆಳಿಯನನ್ನ ನೋಡಿ ಭಾವುಕರಾದರು.

Related Post

Leave a Reply

Your email address will not be published. Required fields are marked *