ಯಾದಗಿರಿ : ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್ ಚಟ್ಟೆಮ್ಮ ಎಂಬ ದಂಪತಿಯ ಮಗುವನ್ನು ಮೀನಾಕ್ಷಿ ಕೊಲೆ ಮಾಡಿದ ಅಪ್ರಾಪ್ತೆ ಎಂದು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಹಸು ಕೂಸನ್ನು ಕೊಲೆ ಮಾಡಿ ಅಕ್ಕ ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಮೀನಾಕ್ಷಿ ಚಿಕ್ಕಪ್ಪನ್ನು ಅಪ್ರಾಪ್ತೆಯ ಪ್ರೀತಿಯನ್ನು ನಿರಾಕರಿಸಿದರು. ಈ ಸಿಟ್ಟಿನಿಂದ ನಾಗೇಶ್ ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿಯನ್ನು ಬಾವಿಯೊಳಗೆ ಹಾಕಿದ್ದಾಳೆ.
ಮೀನಾಕ್ಷಿಯನ್ನು ಆತನ ಚಿಕ್ಕಪ್ಪನ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ ಮಗು ಕಾಣದ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದರು. ಅವರೊಂದಿಗೆ ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ, ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಈ ವಿಚಾರ ತಿಳಿದ ಯಾದಗಿರಿ ಪೊಲೀಸ್ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ನಿಜಾಂಶ ಬಯಲು ಮಾಡಿದ್ದಾರೆ. ಅಪ್ರಾಪ್ತೆಯನ್ನು ವಿಚಾರಣೆಗೆ ನಡೆಸಿದಾಗ ಮೀನಾಕ್ಷಿ ಚಿಕ್ಕಪ್ಪನನ್ನು ಪ್ರೀತಿಸುತ್ತಿದ್ದೆ, ಆಗ ಅವರು ಪ್ರೀತಿಯನ್ನು ನಿರಾಕರಿಸಿದರಿಂದ ಸಿಟ್ಟಿಗೆದ್ದು ಮೀನಾಕ್ಷಿಯನ್ನು ಕೊಲೆ ಮಾಡಿದೆ ಎಂದು ಪೊಲೀಸರು ಎದುರು ಅಪ್ರಾಪ್ತ ಬಾಯಿಬಿಟ್ಟಿದ್ದಾಳೆ ನಗರದ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.