ಚಿತ್ರದುರ್ಗ : ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರವು ಜನರಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ ಆದ್ದರಿಂದ ಕರ್ನಾಟಕ ಸರ್ಕಾರವು ಆರೋಗ್ಯ ಇಲಾಖೆಯಿಂದ ಯಾವುದೇ ವಾತಾವರಣದಲ್ಲಿ ನೀರು ನಿಲ್ಲದಂತೆ ಸ್ವಚ್ಛತೆಯ ಬಗ್ಗೆ ಜಾಗೃತಿ ವಹಿಸಬೇಕೆಂದು ಸಲಹೆ ನೀಡಿದ್ದಾರೆ. ಚಿತ್ರದುರ್ಗ ನಗರದ ಕೆಳಗೋಟೆ ಚನ್ನಕೇಶ್ವರ ನಗರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವಚ್ಛತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ನಗರಸಭೆ ಪೌರಯುಕ್ತರಾದ ಶ್ರೀಮತಿ ಬಿ ರೇಣುಕಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಸೌಚಾಲಯ ಬಳಸಿ ರೋಗ ಓಡಿಸಿ, ಸ್ವಚ್ಛತೆ ಕಾಪಾಡಿ ಡೆಂಗ್ಯೂ ನಿಯಂತ್ರಿಸಿ ಎಂದು ಮಕ್ಕಳಿಗೆ ತಿಳಿಸಿದರು ಎಲ್ಲಾ ಕಡೆ ಹರಡುತ್ತಿರುವುದರಿಂದ ಮೊದಲು ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಹಿಟ್ಟುಕೊಂಡು ಸೊಳ್ಳೆಗಳನ್ನು ನಿರ್ಮೂಲನೆ ಮಾಡಬೇಕೆಂದು ತಿಳಿಸಿದರು.
ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪರಿಸರವನ್ನು ಸಂರಕ್ಷಿಸಬೇಕು ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಹಸಿರು ಪರಿಸರವೇ ಇಲ್ಲದಂತಾಗುತ್ತದೆ ಗಿಡ ನೆಡುವುದು ಮುಖ್ಯವಲ್ಲ ಇದರ ಜೊತೆಗೆ ಅವುಗಳನ್ನು ಜೋಪಾನ ಮಾಡುವುದು ದೊಡ್ಡ ಮರಗಳನ್ನಾಗಿ ಮಾಡುವ ಜವಾಬ್ದಾರಿಯನ್ನು ತಿಳಿಯಬೇಕು ಎಂದರು. ನಗರಸಭೆ ಹೆಲ್ತ್ ಇನ್ಸ್ಪೆಕ್ಟರ್ಗಳಾದ ಸರಳ, ಭಾರತಿ, ನಾಗರಾಜ್, ಪರಿಸರ ಇಂಜಿನಿಯರ್, ಜಾಫರ್, ಮುಖ್ಯ ಶಿಕ್ಷಕಿ ಧನಲಕ್ಷ್ಮಿ, ಹಾಗೂ ಪೌರ ನೌಕರರು ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.