ಡಾಕ್ಟರ್ ಶಿವರಾಜಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ಬೈರತಿ ರಣಗಲ್ಲು ಈ ಸಿನಿಮವು ದೊಡ್ಡ ಮಟ್ಟದಲ್ಲಿಯೇ ಹೆಸರು ಮಾಡುತ್ತಿದೆ ಈ ಚಿತ್ರ ಮಫ್ತಿಯ ಪ್ರೀಕ್ವೆಲ್ ಈ ಚಿತ್ರದ ಪೋಸ್ಟರ್ಗಳು ಮಾತ್ರ ರಿಲೀಸ್ ಆಗಿವೆ. ಈಗ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ ಶಿವರಾಜ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
2017ರಲ್ಲಿ ಬಿಡುಗಡೆ ಮಾಡಿದ ಮಪ್ತಿ ಸಿನಿಮಾದ ಭಾರಿ ಹಿಟ್ ಆಗಿತ್ತು. ಸಿನಿಮಾದಲ್ಲಿ ಬೈರತಿ ರಣಗಲ್ ಪಾತ್ರದಲ್ಲಿ ಶಿವರಾಜಕುಮಾರ್ ಮಿಂಚಿದರು. ಇದೀಗ ಎದೆ ಪಾತ್ರವನ್ನು ಆಧರಿಸಿ ಬೈರೆತಿ ರಣಗಲ್ಲು ಸಿನಿಮಾ ಮಾಡಲಾಗುತ್ತಿದೆ ಈಗ ಸಿನಿಮಾದ ಆಡಿಯೋ ಹಕ್ಕನ್ನು ಆನಂದ ಆಡಿಯೋ ಪಡೆದುಕೊಂಡಿದೆ.
ಮಫ್ತಿ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ಶ್ರೀಮುರಳಿಯವರ ಕಾಂಬಿನೇಷನ್ ಎಲ್ಲರ ಗಮನ ಸೆಳೆದಿದ್ದು ಈಗ ಶಿವಣ್ಣ ಹಾಗೂ ನರ್ತನ ಕಾಂಬಿನೇಷನ್ನಲ್ಲಿ ಬೈರತಿ ರಣಗಲ್ಲು ಸಿನಿಮಾ ಮೂಡಿ ಬರುತ್ತಿದೆ ಈ ಸಿನಿಮಾವನ್ನು ಶಿವಣ್ಣ ಅವರ ಪತ್ನಿ ಗೀತಾ ಶಿವರಾಜಕುಮಾರ ಗೀತಾ ಪಿಚ್ಚರ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಆನಂದ್ ಆಡಿಯೋ ಬೈರತಿ ರಣಗಲ್ಲು ಯೂಟ್ಯೂಬ್ನಲ್ಲಿ ಜುಲೈ 12ರ ಬೆಳಿಗ್ಗೆ 10:30ಕ್ಕೆ ಮೊದಲ ಝಲಕ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ
ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೇ ಪೂರ್ಣಗೊಂಡಿದೆ ಚಿತ್ರತಂಡದ ಕುಂಬಳಕಾಯಿ ಹೊಡೆದಿದ್ದು ಈ ಮೂಲಕ ಮೊದಲು ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ ಆದರೆ ಸಿನಿಮಾದ ಸಮಯವನ್ನು ನಿರ್ದೇಶಕ ನರ್ತನ ತೆಗೆದುಕೊಂಡಿದ್ದಾರೆ ಹೀಗಾಗಿ ಸಿನಿಮಾ ಬಿಡುಗಡೆ ವಿಳಂಬವಾಗಿದೆ ಎನ್ನಲಾಗುತ್ತಿದೆ ಗುರು ದೇಶಪಾಂಡೆ, ಬಾಬು ಹಿರಣ್ಣಯ್ಯ, ಛಾಯಾಸಿಂಗ್ ಇನ್ನು ಮುಂತಾದವರು ಈ ಸಿನಿಮಾದಲ್ಲಿ ಇರಲಿದ್ದಾರೆ ಜೊತೆಗೆ ರುಕ್ಮಣಿ ವಸಂತ, ರಾಹುಲ್ ಬೋಸ್ ಇನ್ನಿತರ ಕೆಲವು ಪಾತ್ರಗಳು ಸೇರಿಕೊಂಡಿವೆ.