Breaking
Tue. Dec 24th, 2024

ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಸಾಹಿತಿ ದಿವಂಗತ ಕಮಲ ಹಂಪನಾ ಸ್ಮರಣಾರ್ಥ ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರ….!

ಚಳ್ಳಕೆರೆ : ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಸಾಹಿತಿ ದಿವಂಗತ ಕಮಲ ಹಂಪನಾ ಸ್ಮರಣಾರ್ಥ ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ  ಭಾಗವಹಿಸಿದ ಶಾಸಕ ಟಿ ರಘುಮೂರ್ತಿ ಸಾಹಿತ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಮಧ್ಯಭಾಗದಲ್ಲಿ ಸುಸಜ್ಜಿತವಾದ ಕನ್ನಡ ಭವನ ನಿರ್ಮಿಸಲಾಗುವುದೆಂದು ತಿಳಿಸಿದರು.

ಭಾಷೆ ಸಾಹಿತ್ಯ ಹಾಗೂ ಜನಪದ ಕಲೆಗಳ ಜೊತೆಗೆ ಸಾಹಿತಿ ದಿವಂಗತ ಕಮಲ ಹಂಪನಾ ಅವರ ಬದುಕು ಬರಹ ಯುವ ಜನರಿಗೆ ಅರ್ಥೈಸಿಕೊಳ್ಳುವಂತೆ ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಮಾಡಬೇಕೆಂದು ಕಿವಿಮಾತು ತಿಳಿಸಿದರು.

ಬಂಡಾಯ ಸಾಹಿತ್ಯ ಸಿ ಶಿವಲಿಂಗಪ್ಪ ಸಮಾಜದ ಹಾಗೂ ಹೋಗುಗಳನ್ನು ನಡೆಯುವಂತೆ ತಮ್ಮ ಬದುಕಿನಲ್ಲಿ ಬದ್ಧತೆಯ ಕಾವ್ಯ ರೂಪದಲ್ಲಿ ಕಟ್ಟಿಕೊಡಬೇಕು ಎಂದು ಯುವಕವಿಗಳಿಗೆ ಕಿವಿಮಾತು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಜಿಟಿ ವೀರಭದ್ರ ಸ್ವಾಮಿ ಕನ್ನಡ ಭವನ ನಿರ್ಮಿಸಿ ಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಜೆ.ಬಿ ಶ್ರೀ ರಾಮರೆಡ್ಡಿ, ಪ್ರಾಧ್ಯಾಪಕ ಪ್ರೊಫೆಸರ್ ಜಿವಿ ರಾಜಣ್ಣ, ಸಹ ಶಿಕ್ಷಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ, ಡಿ ಈರಣ್ಣ , ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಪ್ರಧಾನ ಕಾರ್ಯದರ್ಶಿ, ಸಹ್ಯಾದ್ರಿ ಮಂಜುನಾಥ್ ಕೆ ಚಿತ್ತಯ್ಯ ಮಾತನಾಡಿದರು. ಕವಿಗೋಷ್ಠಿಯಲ್ಲಿ ಆಯ್ಕೆಯಾದ ರಂಗಸ್ವಾಮಿ ರಚಿಸಿದ ಕವನಕ್ಕೆ ಪ್ರಥಮ, ಎನ್ ಅಭಿಷೇಕ್ ದ್ವಿತೀಯ ಹಾಗೂ ರವಿ ಕುಮಾರ್ ಅವರ ಕಾವ್ಯಕ್ಕೆ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಕವಿತೆ ವಾಚನ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಯಾನಂದ್, ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಮಲ್ಲೇಶ್, ಪ್ರೌಢಶಾಲೆ ಕನ್ನಡ ಭಾಷಾ ಬೋಧಕರ ವೇದಿಕೆ ತಾಲೂಕು ಅಧ್ಯಕ್ಷ ಮಹಾಂತೇಶ್, ಶಿಕ್ಷಕರ ಸಂಘದ ದೊಡ್ಡಯ್ಯ, ರವಿಕುಮಾರ್, ದೈಹಿಕ ಶಿಕ್ಷಕ ಮರವಾಯಿ ಶ್ರೀನಿವಾಸ್ ಭಾಗವಹಿಸಿದ್ದರು.

 

 

 

Related Post

Leave a Reply

Your email address will not be published. Required fields are marked *